ನಟಿ ಶ್ರೀಲೀಲಾ ಅವರು ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದಿದ್ದಾರೆ. ಆ ಮೂಲಕ ಶ್ರೀಲೀಲಾ ಮಹಾತಾಯಿಯಾಗಿ ಬದಲಾಗಿದ್ದಾರೆ.
ಮಾತೃ ಶ್ರೀ ಮನೋವಿಕಾಸ ಕೇಂದ್ರದ ಇಬ್ಬರು ದಿವ್ಯಾಂಗ ಮಕ್ಕಳಾದ 8ತಿಂಗಳ ಮಗು ‘ಗುರು’ ಹಾಗೂ ಶೋಭಿತ ಅನ್ನೋ ಹೆಣ್ಣು ಮಗಳನ್ನ ಶ್ರೀಲೀಲಾ ದತ್ತು ಸ್ವೀಕರಿಸಿದ್ದಾರೆ.
ಬೈ ಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರೋ ಶ್ರೀಲೀಲಾ, ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮತ್ತು ಮಾತೃ ಶ್ರೀಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ಮ ಕಂಡೊಡನೆ ಶ್ರೀಲೀಲಾ ಅಕ್ಷರಶಃ ಭಾವುಕರಾದ್ರು, ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.
ಈ ವೇಳೆ ಬೈ ಟು ಲವ್ ಚಿತ್ರದ ನಿರ್ದೇಶಕ ಹರಿ ಸಂತು ಶ್ರೀಲೀಲಾ ಅವ್ರಿಗೆ ಸಾಥ್ ನೀಡಿದ್ರು.
ಶ್ರೀಲೀಲಾ ಅಭಿನಯದ ಬೈಟು ಲವ್ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದ್ದು, ಈ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದಯಂತೆ. ಅಂಥ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಅಂತಿದ್ದಾರೆ ಶ್ರೀಲೀಲಾ. ಬೈ ಟು ಲವ್ ಚಿತ್ರ ಇದೇ 18ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.