ಈ ಎಲ್ಲಾ ಭ್ರಷ್ಟರು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಜನರಿಗೆ ಉಚಿತ ಸೇವೆ ನೀಡುತ್ತಿರುವ ನಾನು ವಿಶ್ವದ ಮೊದಲ ಸಿಹಿ ಭಯೋತ್ಪಾದಕ ಎಂದು ಹೇಳಿಕೊಳ್ಳುವ ಮೂಲಕ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಎಲ್ಲಾ ಭ್ರಷ್ಟರು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಜನರಿಗಾಗಿ ಶಾಲೆಗಳನ್ನು ನಿರ್ಮಿಸುವ, ಆಸ್ಪತ್ರೆಗಳನ್ನು ನಿರ್ಮಿಸುವ, ವಿದ್ಯುತ್ ಸರಿಪಡಿಸುವ ವಿಶ್ವದ ಮೊದಲ ಭಯೋತ್ಪಾದಕ ನಾನು. ನಾನು ವಿಶ್ವದ ಮೊದಲ “ಸಿಹಿ ಭಯೋತ್ಪಾದಕ”
ಬ್ರಿಟಿಷರಿಗೆ ಭಗತ್ ಸಿಂಗ್ ಭಯವಿತ್ತು. ಆದ್ದರಿಂದಲೇ ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದರು. ನಾನು ಭಗತ್ ಸಿಂಗ್ ಅವರ ಶಿಷ್ಯ ಎಂದು ಹೇಳಿಕೆ ನೀಡುವ ಮೂಲಕ ತನ್ನ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇಲ್ಲಿ ಕಾಂಗ್ರೆಸ್ಗೆ ಎಎಪಿ ಪ್ರಬಲ ಪೈಪೋಟಿ ನೀಡುತ್ತಿದೆ. ಇನ್ನು, ಇಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಆಪ್ತು ಕುಮಾರ್ ವಿಶ್ವಾಸ್ ಎನ್ನುವವರು ಪಂಜಾಬ್ನಲ್ಲಿ ಅರವಿಂದ್ ಕೇಜ್ರಿವಾಲ್ ಖಲಿಸ್ತಾನಿಗಳ ಪರವಾಗಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಆ ಬೆನ್ನಲ್ಲೇ, ಪಂಜಾಬ್ ಸಿಂಗ್ ಚರಣ್ ಜಿತ್ ಸಿಂಗ್ ಚನ್ನಿಯವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಈ ಕುಮಾರ್ ವಿಶ್ವಾಸ್ ಅವರ ಹೇಳಿಕೆಯ ಬಗ್ಗೆ ವಿಚಾರಣೆ ನಡೆಸುವಂತೆ ಕೇಳಿಕೊಂಡಿದ್ದರು.