ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ವೀರರಾಣಿ ಬೆಳವಾಡಿಯ ಮಲ್ಲಮ್ಮನವರಿಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣ ವರದಿಯಾಗಿದೆ.
ಯುವಕನನ್ನು ಲಕ್ಷ್ಮೀಕಾಂತ್ ಬೈಂದೂರು ಎಂದು ಗುರುತಿಸಲಾಗಿದೆ. ಈತ ಶಿವಾಜಿಯ ಜಯಂತೋತ್ಸವದಂದು ಶಿವಾಜಿಯನ್ನು ಹೊಗಳುವ ಬರದಲ್ಲಿ ಕನ್ನಡದ ವೀರರಾಣಿ, ವಿಶ್ವದಲ್ಲಿಯೇ ಮೊದಲ ಮಹಿಳಾ ಸೈನ್ಯ ಕಟ್ಟಿದ ವೀರರಾಣಿ ಬೆಳವಾಡಿಯ ಮಲ್ಲಮ್ಮನವರ ಕುರಿತಾಗಿ ತುಚ್ಚ ಪದಗಳಲ್ಲಿ ಬರೆದುಕೊಂಡಿದ್ದಾನೆ.
ಬೆಳವಾಡಿ ಮಲ್ಲಮ್ಮನಿಗೆ ವೇಶ್ಯೆ ಎಂದ ಈ ಧರ್ಮಾಂಧನಿಗೆ ಕೂಡಲೇ ಕಾನೂನು ಕ್ರಮ ಆಗಲೇಬೇಕು@BlrCityPolice
ಇಂತಹ ರಣಹೇಡಿಗಳು ತಾಯಿ ನಾಡನ್ನೇ ಹಂಗಿಸಿ ಇವತ್ತು ಕನ್ನಡಿಗರನ್ನು ಈ ಮಟ್ಟಕ್ಕೆ ಕೀಳು ಶಬ್ದಗಳಲ್ಲಿ ನಿಂದನೆ ಮಾಡುತ್ತಿರೋದು ನಿಜಕ್ಕೂ ಶೋಚನೀಯ.
ಈ ದ್ರೋಹಿಗೆ ಪಾಠ ಆಗಲೇಬೇಕು
ಲಿಂಕ್-https://t.co/bbWyFXYPcw pic.twitter.com/pBsSvehYQt— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) February 20, 2022
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, ಆರೋಪಿಯ ಪೋಸ್ಟ್ ಹಂಚಿಕೊಂಡಿದ್ದಾರೆ. ಅಲ್ಲದೇ, ಕನ್ನಡದ ವೀರಮಾತೆಗೆ ಅವಾಚ್ಯವಾಗಿ ನಿಂದಿಸಿರುವ ಯುವಕನ ಮೇಲೆ ಕಿಡಿಕಾರಿರುವ ಅವರು ಬನಶಂಕರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕನ್ನಡತಿ ಬೆಳವಾಡಿ ಮಲ್ಲಮ್ಮನನ್ನು ಸೂಳೆ(ವೈಶ್ಯೇ)ಎಂದು ಹೇಳಿ
ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿರೋ
ಈ ರಣಹೇಡಿ ಧರ್ಮಾಂಧ ಲಕ್ಷೀಕಾಂತ್ ವಿರುದ್ಧ ಇಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿ ಕೂಡಲೇ ಕ್ರಮ ಜರುಗಿಸುವ ಭರವಸೆ ಸಿಕ್ಕಿದೆ.@BlrCityPolice ದಯವಿಟ್ಟು ಇಂತಹ ನೀಚರನ್ನು ಬಿಡಬೇಡಿ..
ಇದು ಎಲ್ಲರಿಗೂ ಪಾಠವಾಗಬೇಕು. pic.twitter.com/exuY0Pym3q— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) February 20, 2022