ಪವರ್ ಟಿವಿ MD ರಾಕೇಶ್ ಶೆಟ್ಟಿ ಮತ್ತು HR ಮಧು ವಿರುದ್ಧ FIR ದಾಖಲಿಸುವಂತೆ ಬೆಂಗಳೂರಿನ ಕೋರ್ಟ್ ಸೂಚಿಸಿದೆ.
ವೇತನ ನೀಡದೆ ವಂಚನೆ, ನಂಬಿಕೆ ದ್ರೋಹ ಮತ್ತು ಬೆದರಿಕೆ ಆರೋಪದಡಿ FIRಗೆ ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯ ಯಶವಂತಪುರ ಪೊಲೀಸರಿಗೆ ಆದೇಶಿಸಿದೆ.
ಪವರ್ ಟಿವಿ ಸಂಸ್ಥೆ ಮಾಜಿ ಉದ್ಯೋಗಿ ಶಶಿಧರ್ ಅವರು ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಪೊಲೀಸರು ಪವರ್ ಟಿವಿ ಮಾಲೀಕರ ವಿರುದ್ಧ FIR ದಾಖಲಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಶಶಿಧರ್ ಅವರು ಹೈಕೋರ್ಟ್ ವಕೀಲ ರಮೇಶ್ ಅವರ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದರು.