ಶನಿವಾರ ಶ್ರೀಲಂಕಾ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಭಾರತದ ಬ್ಯಾಟರ್ ಇಶಾನ್ ಕಿಶನ್ ತಲೆಗೆ ಗಾಯವಾಗಿದ್ದು, ಅವರನ್ನು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ, ಶ್ರೀಲಂಕಾ ಬ್ಯಾಟರ್ ದಿನೇಶ್ ಚಾಂಡಿಮಾಲ್ ಅವರು ಇದೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡನೇ ಟಿ-20 ಯಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕವನ್ನು ಸಿಡಿಸಿದ್ದರು, ರವೀಂದ್ರ ಜಡೇಜಾ 18 ಎಸೆತಗಳಲ್ಲಿ 45 ರನ್ ಗಳಿಸಿದರು. ಈ ಇಬ್ಬರ ಆಟ ಭಾರತ ತಂಡ 2 ನೇ ಟಿ-20ಯಲ್ಲಿ ಶ್ರೀಲಂಕಾವನ್ನು ಏಳು ವಿಕೆಟ್ಗಳಿಂದ ಸೋಲಿಸಲು ಸಹಾಯಕವಾಯಿತು.
ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಟಿ20 ಸರಣಿಯನ್ನು (2-0) ಇನ್ನೂ ಒಂದು ಆಟ ಬಾಕಿ ಉಳಿದಿದೆ. ಎರಡೂ ತಂಡಗಳ ನಡುವಿನ ಮೂರನೇ ಟಿ20 ಭಾನುವಾರ ನಡೆಯಲಿದೆ.
184 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡವು ಮೊದಲ ಓವರ್ನಲ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ಕಳೆದುಕೊಂಡಿದ್ದರಿಂದ ಕೆಟ್ಟ ಆರಂಭವನ್ನು ಪಡೆಯಿತು. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ 35 ರನ್ ಜೊತೆಯಾಟವನ್ನು ಮಾಡಿದರು ಆದರೆ ಲಹಿರು ಕುಮಾರ ಆರನೇ ಓವರ್ನಲ್ಲಿ ವಿಕೇಟ್ ಪಡೆದುಕೊಂಡರು. ನಂತರ ಶ್ರೇಯಸ್ ಮತ್ತು ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ನ್ನು ಗೆಲುವಿನ ದಡ ಸೇರಿಸಿದರು.
ಜಡೇಜಾ ಮತ್ತು ಶ್ರೇಯಸ್ ಅಯ್ಯರ್ (74) ಎರಡನೇ ಟಿ20ಯಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಜಯದೊಂದಿಗೆ ಭಾರತದ ಗೆಲುವಿಗೆ ಕಾರಣರಾದರು. ಜಡೇಜಾ ಮತ್ತು ಶ್ರೇಯಸ್ 25 ಎಸೆತಗಳಲ್ಲಿ 58 ರನ್ಗಳ ಮಹತ್ವದ ಜೊತೆಯಾಟವನ್ನು ನೀಡಿದರು. ಇನ್ನು, ಎರಡೂ ಪಂದ್ಯಗಳಲ್ಲಿ ಸ್ಪೋಟಕ ಆಟವಾಡಿದ್ದ ಇಶಾನ್ ಕಿಶಾನ್ ಇಂದು ನಡೆಯುವ 3 ನೇ ಟಿ-20 ಗೆ ಅಲಭ್ಯರಾಗುತ್ತಾರೆ ಎಂದು ಹೇಳಲಾಗುತ್ತಿದೆ.