‘Shhh..Someone Watching You’ (ಶ್… ಯಾರೋ ನಿನ್ನ ನೋಡುತ್ತಿದ್ದಾರೆ..!) ಎನ್ನುವ ಕಿರುಚಿತ್ರ ಬಿಡುಗಡೆಯಾಗಿದೆ.
ಈ ಕಿರುಚಿತ್ರವು ಕೇವಲ ಒಂದೇ ನಿಮಿಷವಿರುವುದು ವಿಶೇಷ. ನಿರ್ದೇಶಕರು ಸಾಮಾಜಿಕ ಕಳಕಳಿಯನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಆಲ್ಲದೇ, ಇಂದಿನ ಸ್ಮಾರ್ಟ್ಫೋನ್ಯುಗದಲ್ಲಿ ನಾವು ಪ್ರತಿಕ್ಷಣವೂ ಕಣ್ಗಾವಲಿನಲ್ಲಿದ್ದೇವೆ ಎಂಬುದನ್ನು ಚಿತ್ರದ ನಿರ್ದೇಶಕ ಶ್ರೀ ಜೆ ಬಂಗೇರ ಅವರು ಹೇಳುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಾತಿ ಕುಮಾರಿ ಅವರು ಮನೋಜ್ಞವಾಗಿ ನಟಿಸಿದ್ದಾರೆ.
ನವನೀತ್ ವಿಟ್ಠಲ್ ಅವರ ಕ್ಯಾಮರಾ ಕೈ ಚಳಕದ ಜೊತೆಗೆ ಸಂಕಲನದಲ್ಲೂ ಕೈ ಚಳಕ ಮೂಡಿಸಿದ್ದಾರೆ. ಅಭಿ ಬೋಳಿಯಾರ್ ಸಹಾಯಕ ಕ್ಯಾಮರಾಮ್ಯಾನ್ ಆಗಿದ್ದಾರೆ.