ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಿರಿಯ ಪತ್ರಕರ್ತ, ಜಾನ್ ವಿಲ್ ಮೊರೈನ್ ಇನ್ ಫಾರ್ಮೇಶನ್ ಪತ್ರಿಕೆಯ ಸಂಪಾದಕ ಕೆ.ಜಾನ್ (71 ವರ್ಷ) ನಿಧನರಾದ ಹಿನ್ನೆಲೆಯಲ್ಲಿ ಮಂಗಳೂರು ನಗರದ ಲೇಡಿಹಿಲ್ ನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.
ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಭಾಸ್ಕರ್ ರೈ ಕಟ್ಟ, ಆರೀಫ್ ಪಡುಬಿದ್ರೆ, ಪುಷ್ಪರಾಜ್ ಶ್ರದ್ದಾಂಜಲಿ ನುಡಿಗಳನ್ನಾಡಿದ್ರು.
ಈ ಕಾರ್ಯಕ್ರಮದಲ್ಲಿ ದಿವಂಗತ ಜಾನ್ ಅವರ ಪುತ್ರಿ ತಂದೆಯ ಬಗ್ಗೆ ಮಾತನ್ನಾಡಿದ್ರು. ಈ ಕಾರ್ಯಕ್ರಮದಲ್ಲಿ ದಿವಂಗತ ಕೆ.ಜಾನ್ ರ ಪತ್ನಿ, ಮಗಳು, ಅಳಿಯ ಉಪಸ್ಥಿತರಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸುಖ್ ಪಾಲ್ ಪೊಳಲಿ, ಅನ್ಸಾರ್ ಇನೋಳಿ, ರಾಜೇಶ್ ದಡ್ಡಂಗಡಿ, ಭರತ್, ಆಶ್ವಿನ್, ಕೆವಿನ್, ಶರತ್, ಗಣೇಶ್, ಶಂಶೀರ್ ಬುಡೋಳಿ ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು. ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.