ಸ್ಯಾಂಡಲ್ವುಡ್ನಲ್ಲಿ ‘ಸಲಗ’ ಸಿನಿಮಾ ಸಖತ್ ಸದ್ದು ಮಾಡಿತ್ತು. ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ ‘ಸಲಗ’ ಚಿತ್ರಮಂದಿರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ, ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆದಿತ್ತು. ಇದೀಗ ದುನಿಯಾ ವಿಜಿ ಸಲಗ ಯಶಸ್ಸಿನ ನಂತರ ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ.
ಸಲಗ ಚಿತ್ರದ ನಂತರ ನಟ ದುನಿಯಾ ವಿಜಯ್ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಇದೀಗ ವಿಜಯ್ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ದುನಿಯಾ ವಿಜಯ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದು, ಪೋಸ್ಟರ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೈರಾಗಿ ಸಿನಿಮಾ ನಿರ್ಮಾಪಕರಾದ ಸಾರ್ಥಕ್ ಕೃಷ್ಣ ಮತ್ತು ಜಗದೀಶ್ ಗೌಡ ಸಹಯೋಗದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಟೈಟಲ್ ಇನ್ನೂ ಅನಾವರಣಗೊಂಡಿಲ್ಲ, ಮಾರ್ಚ್ 1 ರಂದು ಮಹಾಶಿವರಾತ್ರಿಯಂದು ವಿಜಯ್ ಹೊಸ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ದುನಿಯಾ ವಿಜಯ್ ತೆಲುಗಿಗೂ ಪಾದಾರ್ಪಣೆ ಮಾಡಿದ್ದು,, ಗೋಪಿ ಚಂದ್ ಮಲಿನೇನಿ ನಿರ್ದೇಶನದ ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.