ರಾಜ್ಯ ಸರ್ಕಾರ ರಾತ್ರೋರಾತ್ರಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಕನ್ನಡದ ಕಗ್ಗೋಲೆ ನಡೆಸಿದೆ. ಈ ಸುತ್ತೋಲೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಸರ್ಕಾರ ತಿದ್ದುಪಡಿ ಮಾಡಿ ಮತ್ತೊಂದು ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಶುಕ್ರವಾರ ಮಧ್ಯಾಹ್ನ ಸರ್ಕಾರಿ ಕಚೇರಿಗಳಲ್ಲಿನ ಕೆಲಸದ ವೇಳೆಯಲ್ಲಿ ಫೋಟೋ ಹಾಗೂ ವಿಡಿಯೋ ತೆಗೆಯುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶಕ್ಕೆ ಸರ್ವಾಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಕೆಆರ್ಎಸ್, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸರ್ಕಾರದ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಇದು 40 ಪ್ರತಿಶತ ಕಮಿಷನ್ನ ಭಾಗ ಎಂದು ಜರಿದಿದ್ದವು.
ಈ ಬೆನ್ನಲ್ಲೇ, ಎಚ್ಚೆತ್ತಿದ್ದ ರಾಜ್ಯ ಸರ್ಕಾರ ಮಧ್ಯರಾತ್ರಿ ಸರ್ಕಾರಿ ಕಚೇರಿಗಳಲ್ಲ ಫೋಟೋ, ವೀಡಿಯೋ ಸೆಯಿಡಿಯುವಂತಿಲ್ಲ ಎಂಬ ಆದೇಶವನ್ನು ವಾಪಾಸು ಪಡೆದು ಸುತ್ತೋಲೆ ಹೊರಡಿಸಿತ್ತು.
ಈ ಸುತ್ತೋಲೆಯಲ್ಲಿ ಅಕ್ಷರಶಃ ಕನ್ನಡ ಭಾಷೆಯ ಕಗ್ಗೋಲೆಯೇ ನಡೆದಿತ್ತು. ಕೆಲವೇ ವಾಕ್ಯಗಳ ಈ ಆದೇಶದಲ್ಲಿ ಹಲವು ತಪ್ಪುಗಳನ್ನು ಮಾಡಲಾಗಿತ್ತು. ‘ನಡಾವಳಿ, ಪ್ರಸ್ತಾವನೆ, ಮೇಲೆ, ಭಾಗ, ಕರ್ನಾಟಕ’,
‘ಆಡಳಿತ’ ಎಂಬ ಪದಗಳನ್ನು ತಪ್ಪಾಗಿ ಬರೆಯಲಾಗಿತ್ತು. ನೆಟ್ಟಿಗರು ಈ ಆದೇಶದಲ್ಲಿನ ತಪ್ಪುಗಳನ್ನು ಹುಡುಕಿ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.
ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿಯವರು ಸರ್ಕಾರ ಕನ್ನಡದ ಕಗ್ಗೊಲೆ ಮಾಡುತ್ತಿದೆ. ಇದು ಹಿಂದೆ ಏರಿಕೆಯ ಭಾಗ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ, ಮತ್ತೊಮ್ಮೆ ಮುಜುಗರದಿಂದ ಎಚ್ಚೆತ್ತಿರುವ ಸರ್ಕಾರ ಈ ಆದೇಶವನ್ನು ಮತ್ತೆ ವಾಪಾಸ್ ಪಡೆದು ಮತ್ತೊಂದು ಆದೇಶ ಹೊರಡಿಸಿದೆ.