ವಿಕ್ರಾಂತ್ ರೋಣ ರಿಲೀಸ್ಗೆ ಇನ್ನೂ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದೆ. ಇದಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ಇದೆ ಆಗಸ್ಟ್ 6ರಿಂದ ಶುರುವಾಗಲಿದೆ. ಇದರ ನಡುವೆ ಕಿಚ್ಚ ಸುದೀಪ್ ಹೊಸ ಚಿತ್ರಕ್ಕೆ ಗ್ರೀನ್ ಸೀಗ್ನಲ್ ಕೊಟ್ಟಿದ್ದಾರೆ. ಇದೆ ವರ್ಷ ಅಕ್ಟೋಬರ್ನಲ್ಲಿ ಶೂಟಿಂಗ್ ಶುರುವಾಗಲಿದೆ.
ಇಡೀ ಭಾರತಿಯ ಚಿತ್ರರಂಗದಲ್ಲೇ ಸಿಕ್ಕಾಪಟ್ಟೆ ಸೌಂಡ್ ಕ್ರಿಯೇಟ್ ಮಾಡಿರುವ ಚಿತ್ರ ವಿಕ್ರಾಂತ್ ರೋಣ. ಇತ್ತಿಚ್ಚಿಗೆ ಅಷ್ಟೆ ಕಿಚ್ಚ ಸುದೀಪ್ ಸಂದರ್ಶನ ವೇಳೆ ತಮ್ಮ ಮುಂದಿನ ಚಿತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. ಇಂಡಿಯನ್ ಫಿಲ್ಮ್ಂ ಮೇಕರ್ ತೆಮಿಳು ವೆಂಕಟ್ ಪ್ರಭು ಜೊತೆ ಕಿಚ್ಚ ಸುದೀಪ್ ಸಾಥ್ ನೀಡಲಿದ್ದಾರೆ.
ಭಾರತಿಯ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಆಗಿ ರಾರಾಜಿಸುತ್ತಿರುವ ಕಿಚ್ಚ ಸುದೀಪ್ ಪರಭಾಷೆಯಲ್ಲೂ ಹಾಗೂ ಹೊರದೇಶದಲ್ಲೂ ಅಪಾರ ಅಭಿಮಾನಿಗಳನ್ನು ಘಳಿದ್ದಾರೆ. ಗಡಿ ದಾಟಿ ಬೆಳೆದಿರುವ ಬಹುಮುಖ ಪ್ರತಿಭೆ ಕಿಚ್ಚ ಸುದೀಪ್ ಸದ್ಯ ʻವಿಕ್ರಾಂತ್ ರೋಣʼ ಗ್ರ್ಯಾಂಡ್ ಆಗಿ ರಿಲೀಸ್ ಆಗುವುದಕ್ಕೆ ದಿನಗಣನೆ ಶುರುವಾಗಿದೆ. 3ಡಿ ರೂಪದಲ್ಲಿ ಬಹುಭಾಷೆಗಳಲ್ಲಿ ಇದೇ ಜುಲೈ 28ಕ್ಕೆ ತೆರೆಗೆ ಬರಲಿದೆ.
ತಮಿಳಿನ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ವೆಂಕಟ್ ಪ್ರಭು ಈಗ ಕಿಚ್ಚ ಸುದೀಪ್ಗೆ ಡೈರೆಕ್ಷನ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಭಾರತದ ಸೌತ್ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರುವ ವೆಂಕಟ್ ಪ್ರಭು ಈಗ ಕಿಚ್ಚನಿಗಾಗಿ ಭಿನ್ನ ಕಥೆಯೊಂದನ್ನ ರೆಡಿ ಮಾಡಿ, ಈಗಾಗಲೇ ಕಿಚ್ಚನಿಗೆ ಸ್ಟೋರಿ ಹೇಳಿದ್ದಾರೆ. ಕಥೆ ಕೇಳಿ ಸುದೀಪ್ ಕೂಡ ಓಕೆ ಅಂದಿದ್ದಾರೆ. ಇನ್ನೂ ಈ ಚಿತ್ರ ಮುಂದಿನ ವರ್ಷ ತೆರೆಮೇಳೆ ಬರುವ ಸಾಧ್ಯತೆಗಳು ಹೇಚ್ಚಾಗಿದೆ.
ಬಾದ್ಷ ಕಿಚ್ಚ ಸುದೀಪ್ ಕೈಯಲ್ಲಿ ‘ಬಿಲ್ಲ ರಂಗ ಬಾಷ’ ‘ರವಿಬೋಪಣ್ಣ’ ‘ಕನ್ವರ್ ಲಾಲ್’ ‘ಕಬ್ಜ’ ಇನ್ನೂ ಮುಂತಾದ ಸಿನಿಮಾಗಳು ತಮ್ಮ ಕೈಯಲ್ಲಿ ಇದೆ ಎಂದು ಹೇಳಬಹುದಾಗಿದೆ.