ಮಗಳ ಮದುವೆಯ ಸಂತೋಷದಲ್ಲಿದ್ದ ಪೋಷಕರು ಇದೀಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ತನ್ನ ಮದುವೆಯಲ್ಲಿ ಖುಷಿ-ಖುಷಿಯಾಗಿ ಓಡಾಡಿಕೊಂಡಿದ್ದ ಯುವತಿ ಇದೀಗ ಯಮರಾಯನ ಬಾಗಿಲು ತಟ್ಟಿದ್ದಾಳೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮದುವೆಯ ಅರತಕ್ಷತೆಯ ಸಂಭ್ರಮದಲ್ಲಿದ್ದ ಮದುಮಗಳು ಚೈತ್ರಾ (26) ತೀವ್ರ ಅಸ್ವಸ್ಥಗೊಂಡು ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಚೈತ್ರಾರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವಿಧಿಯ ಬರಹವೇ ಬೇರೆ ಇತ್ತು.
ಚೈತ್ರಾರನ್ನು ತಪಾಸಣೆ ಮಾಡಿದ ವೈದ್ಯರು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿದ್ದಾರೆ. ಮದುವೆಯ ಸಂತೋಷದಲ್ಲಿದ್ದಯುವತಿ ಏಕಾಏಕಿ ಸಾವಿನ ದವಡೆಗೆ ಬಂದಿದ್ದಾಳೆ. ವೈದ್ಯರು ಬ್ರೈನ್ ಡೆಡ್ ಎಂದು ಘೋಷಿಸುತ್ತಲೇ, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂತ ಕಷ್ಟದ ಸಮಯದಲ್ಲಿಯೂ ಪೋಷಕರು ಸಾರ್ಥಕತೆ ಮರೆದಿದ್ದಾರೆ. ಮಗಳು ಚೈತ್ರಾರ ಅಂಗಾಗ ದಾಣ ಮಾಡು ನಿರ್ಧಾರವನ್ನು ಪೋಷಕರು ತೆಗೆದುಕೊಂಡಿದ್ದಾರೆ.