ಕಾಂಗ್ರೆಸ್ ಭಿನ್ನಮತೀಯರ ನಾಯಕ ಗುಲಾಂ ನಬಿ ಸಿಂಗ್ ಅವರನ್ನು ಕಾಂಗ್ರೆಸ್ನ ಅಧಿನಾಯಕಿ ಭೇಟಿಯಾಗಿ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಭಿನ್ನಮತೀಯರು ಗುಲಾಂ ನಬಿ ಅಜಾದ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ನ ಮುಂದಿನ ದಾರಿಯ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ನ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಯ 23 ಭಿನ್ನಮತೀಯರ ನಾಯಕರ ಗುಂಪು ಸರಣಿ ಸಭೆಗಳನ್ನು ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವದ ಬಗ್ಗೆ ಈ ನಾಯಕರ ಚರ್ಚಿಸುತ್ತಿದ್ದಾರೆ.
ಕಳೆದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ನಾಯಕರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಪಕ್ಷದಲ್ಲಿನ ಸ್ಥಾನದ ರಾಜೀನಾಮೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಕಾಂಗ್ರೆಸ್ನ ಸೋಲು ಹಾಗೂ ಪಕ್ಷದ ವರ್ಚಸ್ಸು ಕ್ಷೀಣಿಸುವಿಕೆಯ ಆರಂಭದ ನಂತರ 2020 ರಲ್ಲಿ ಜಿ-23 ನಾಯಕರ ಗುಂಪು ಸೋನಿಯಾಗಾಂಧಿಗೆ ಪತ್ರ ಬರೆದು ಪಕ್ಷದ ಸಾಂಸ್ಥಿಕ ಪುನರ್ ರಚನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಇಂದಿನವರೆಗೂ ಪಕ್ಷದ ನಾಯಕತ್ವದ ಬಗ್ಗೆ ಈ ನಾಯಕರು ಪ್ರಶ್ನಿಸುತ್ತಲ್ಲೇ ಬರುತ್ತಿದ್ದಾರೆ.
ಬುಧವಾರ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಈ ಗುಂಪು, ಕಾಂಗ್ರೆಸ್ನ ಮುಂದಿರುವ ಏಕೈಕ ಮಾರ್ಗವೆಂದರೆ ಎಲ್ಲಾ ಹಂತಗಳಲ್ಲಿ ಸಾಮೂಹಿಕ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮಾದರಿಯನ್ನು ಅಳವಡಿಸಿಕೊಳ್ಳುವುದು. ನಾವು ಕಾಂಗ್ರೆಸ್ ಅನ್ನು ಬಲಪಡಿಸಲು ಬಯಸುತ್ತೇವೆಯೇ ಹೊರತು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಲು ಅಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಜಿ-23 ಗುಂಪಿನ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.