ಬಾಲಿವುಡ್ ಸೆಲೆಬ್ರೆಟಿ ದಂಪತಿ ರಣಭೀರ್ ಕಪೂರ್ ಮತ್ತು ಆಲಿಯಾ ಬಟ್ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಭಾನುವಾರ ಮುಂಬೈನ ಕೆಎಚ್ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಎರಡೂ ಕುಟುಂಬಗಳಲ್ಲಿಯೂ ಇದು ಸಂಭ್ರಮಕ್ಕೆ ಕಾರಣವಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
https://www.instagram.com/p/CknJuW3LtxC/?igshid=YmMyMTA2M2Y=
ಇಂದು ಬೆಳಗ್ಗೆ 7 ಗಂಟೆಗೆ ಹೆರಿಗೆಗೆಂದು ಆಲಿಯಾ ಭಟ್, ಮುಂಬೈನಲ್ಲಿರುವ ಎಚ್.ಎನ್. ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ 12.05ರ ಸಮಯಕ್ಕೆ ಮಗು ಜನಿಸಿದೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ವರ್ಷದ ಏಪ್ರಿಲ್ನಲ್ಲಿ ಆಲಿಯಾ ಮತ್ತು ರಣಬೀರ್ ಇಬ್ಬರು ಮದುವೆ ಆದರು. ಜೂನ್ ತಿಂಗಳಲ್ಲಿ ಆಲಿಯಾ, ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಇನ್ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದರು. ಕಳೆದ ತಿಂಗಳು ಮುಂಬೈನಲ್ಲಿರುವ ಆಲಿಯಾ ಮತ್ತು ರಣಬೀರ್ ಅವರ ಮನೆಯಲ್ಲಿ ಫ್ರೆಂಡ್ಸ್ ಎಲ್ಲ ಸೇರಿ ಸೀಮಂತ ಕಾರ್ಯಕ್ರಮ ನಡೆಸಿದರು. ಇದೀಗ ಹೆಣ್ಣು ಮಗುವಿಗೆ ಆಲಿಯಾ ಜನ್ಮ ನೀಡಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.