ಉಗ್ರರಿಗೆ ಆರ್ಥಿಕ ಸಹಾಯ ಮಾಡಿದ್ದ ಆರೋಪದ ಮೇಲೆ ಕಾಶ್ಮೀರದ ಪ್ರತ್ಯೇಕತಾವಾದಿ ಯಾಸೀನ್ ಮಲಿಕ್ಗೆ ದೆಹಲಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಇದೀಗ, ಈ ತೀರ್ಪಿನ ವಿರುದ್ಧ ಕಾಶ್ಮೀರದ ಶ್ರೀನಗರದಲ್ಲಿ ಯಾಸಿನ್ ಮಲಿಕ್ ಪರವಾಗಿ ಕೋರ್ಟ್ ತೀರ್ಪಿನ ವಿರುದ್ಧವಾಗಿ ಪ್ರತಿಭಟನೆ ಮಾಡಲಾಗಿದೆ. ಈ ಪ್ರತಿಭಟನೆಯಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿ, ಕಲ್ಲುಗಳನ್ನು ಎಸೆಯಲಾಗಿದೆ. ಈ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ 10 ಜನರನ್ನು ಶ್ರೀನಗರದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು, ಗಲಭೆ ಸೃಷ್ಠಿ, ದೇಶವಿರೋಧ ಹಾಗೂ ಕೋಮು ಸೌಹಾರ್ದ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಮತ್ತು ಯಾಸಿನ್ ಮಲಿಕ್ ಮನೆ ಹೊರಗಡೆ ಗೂಂಡಾಗಿರಿ ಎಸಗಲಾಗಿದೆ. ಮಧ್ಯರಾತ್ರಿ ಹಲವು ಬಾರಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀನಗರದ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಯ ಸೆಕ್ಷನ್ 13 ರ ಅಡಿಯಲ್ಲಿ ಎಫ್ಐಆರ್ ನಂ 10/2022 ಅನ್ನು ದಾಖಲಿಸಲಾಗಿದೆ ಅಲ್ಲದೇ, ಐಪಿಸಿ ಸೆಕ್ಷನ್ ಅಡಿ 120B,147,148,149, 336 ಗಲ ಅಡಿಯಲ್ಲಿ ಮೈಸುಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಬಲ್ವಾಲ್ ಹೇಳಿದ್ದಾರೆ.