ಕರ್ನಾಟಕದ ಮೂರು ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಕಬ್ಬಿಣದ ಅದಿರು ಗಣಿಕಾರಿಕೆಯನ್ನು ಮತ್ತೆ ಆರಂಭಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಅಲ್ಲದೇ ಕಬ್ಬಿಣದ ಅದಿರಿನ ರಫ್ತಿಗೂ ಅನುಮತಿ ನೀಡಿದೆ.
2012ರಲ್ಲಿ ಸುಪ್ರೀಂಕೋರ್ಟ್ ಕಬ್ಬಿಣದ ಅದಿರಿನ ರಫ್ತಿನ ಮೇಲೆ ಸಂಪೂರ್ಣ ನಿರ್ಬಂಧ ಹೇರಿತ್ತು. ಕರ್ನಾಟಕದಲ್ಲಿ ಗಣಿ ಅಕ್ರಮ ಮಿತಿಮೀರಿದ್ದ ಹಿನ್ನೆಲೆಯಲ್ಲಿ ಮತ್ತು ವ್ಯಾಪಕ ಗಣಿ ಅಕ್ರಮದಿಂದ ಪರಿಸರದ ಮೇಲಾಗಿದ್ದ ದುಷ್ಪರಿಣಾಮ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅದಿರು ರಫ್ತಿಗೆ ನಿಷೇಧ ಹೇರಿತ್ತು.
ಗಣಿಗಾರಿಕೆ ಮತ್ತು ಅದಿರು ರಫ್ತಿನ ಮೇಲಿದ್ದ ನಿಷೇಧವನ್ನು ತೆರವುಗೊಳಿಸುವಂತೆ ಗಣಿ ಕಂಪನಿಗಳು ಸುಪ್ರೀಂಕೋರ್ಟ್ ಮನವಿ ಮಾಡಿದ್ದವು.