ಬಿಟ್ ಕನೆಕ್ಟ್ ಎನ್ನುವ ಕ್ರಿಪ್ಟೊ ಕರೆನ್ಸಿ ಸ್ಥಾಪಕ ಭಾರತೀಯ ಮೂಲದ ಉದ್ಯಮಿ ಸತೀಶ್ ಕುಂಬಾನಿ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ FBI ವಂಚನೆ ಪ್ರಕರಣ ದಾಖಲಿಸಿದೆ.
ಸತೀಶ್ ಅವರು ಜಾಗತಿಕ ಮಟ್ಟದಲ್ಲಿ ಪಾಂಝಿ ಸ್ಕೀಮನ್ನು ನಡೆಸುತ್ತಿದ್ದು, ಅದರ ಮೌಲ್ಯ 18,000 ಕೋಟಿ ರೂ.ಗಳಿಗೂ ಅಧಿಕ ಎಂದು ಹೇಳಲಾಗಿದೆ.
ಆರೋಪ ಸಾಬೀತಾದಲ್ಲಿ ಸತೀಶ್ ಕುಂಬಾನಿ ಅವರಿಗೆ ಗರಿಷ್ಠ 70 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಸತೀಶ್ ಅವರು ಹೂಡಿಕೆದಾರರ ದಾರಿ ತಪ್ಪಿಸಿ ಹಣ ಸಂಗ್ರಹಿಸಿರುವ ಮಾಹಿತಿ ಇದೆ ಎನ್ನಲಾಗುತ್ತಿದೆ.