RTI ಮೂಲಕ ಪಡೆದ ಮಾಹಿತಿ ಪ್ರಕಾರ ದೇಶದಲ್ಲಿ 19ಲಕ್ಷ ವಿದ್ಯುನ್ಮಾನ ಮಾತಯಂತ್ರ ನಾಪತ್ತೆ ಆಗಿವೆ. ಅವು ಎಲ್ಲಿ ಹೋದವು? ಎಂದು ಕಾಂಗ್ರೆಸ್ ಹಿರಿಯ ನಾಯಕ HK ಪಾಟೀಲ್ ಗಂಭೀರವಾದ ಪ್ರಶ್ನೆಯೊಂದನ್ನು ಎತ್ತಿದ್ದಾರೆ.
ವಿಧಾನ ಸಭೆಯಲ್ಲಿ ಚುನಾವಣಾ ವ್ಯವಸ್ಥೆಗಳ ಸುಧಾರಣೆ ಅಗತ್ಯ – ಒಂದು ದೇಶ ಒಂದು ಚುನಾವಣೆ ಕುರಿತ ಚರ್ಚೆ ವೇಳೆ HK ಪಾಟೀಲ್ EVM ದುರ್ಬಳಕೆ ಕುರಿತಾಗಿ ಮಾತನಾಡಿದರು.
BEL ಸಂಸ್ಥೆಯಿಂದ 9,64,270 EVM, ECIL ಸಂಸ್ಥೆಯಿಂದ 9,29,992 EVM ನಾಪತ್ತೆ ಎಂದು RTI ದಾಖಲೆ ಹೇಳುತ್ತಿವೆ.
2014-15ರಲ್ಲಿಚುನಾವಣಾ ಆಯೋಗಕ್ಕೆ 62,183 EVM ಪೂರೈಕೆ ಮಾಡಿರುವುದಾಗಿ BEL ಹೇಳುತ್ತಿದೆ. ಆದರೇ ಅವು ತಲುಪಿಯೇ ಇಲ್ಲ ಚುನಾವಣಾ ಆಯೋಗ ಹೇಳುತ್ತಿದೆ. ಹಾಗಾದರೆ ಆ EVM ಏನಾದವು ಎಂದು HK ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಬೇಕು. EVM ದುರ್ಬಳಕೆ ಆಗುತ್ತಿಲ್ಲ ಎಂದು ಸಾಬೀತು ಪಡಿಸದೇ ಹೋದರೆ ಈ ಕುರಿತ ಅನುಮಾನಗಳಿಗೆ ಇನ್ನಷ್ಟು ಬಲ ಬರುತ್ತದೆ. ನಾನು ಕೊಟ್ಟಿರುವ ಮಾಹಿತಿ ತಪ್ಪಾಗಿದ್ದರೆ ಯಾವ ಶಿಕ್ಷೆ ನೀಡಿದರೂ ಅನುಭವಿಸಲು ನಾನು ತಯಾರಿದ್ದೇನೆ ಎಂದು HK ಪಾಟೀಲ್ ಸವಾಲು ಹಾಕಿದ್ದಾರೆ.
ಚುನಾವಣಾ ಆಯೋಗಕ್ಕೆ ಸಮನ್ಸ್ ನೀಡಿ, EVM ದುರ್ಬಳಕೆಯ ಸತ್ಯಾಸತ್ಯತೆ ಗೊತ್ತಾಗಲಿ ಎಂದು ಸ್ಪೀಕರ್ ಗೆ ರಮೇಶ್ ಕುಮಾರ್ ಸಲಹೆ ನೀಡಿದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿ, EVM ನಾಪತ್ತೆಗೆ ಸಂಬಂಧಿಸಿದ ದಾಖಲೆ ಕಳಿಸಿಕೊಡಿ, ಸಂಶಯ ನಿವಾರಣೆಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.