ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ವಿರುದ್ಧ ನಂಬಿಸಿ ವಂಚನೆ ಎಸಗಿದ ಆರೋಪ ಪ್ರಕಾರಣಕ್ಕೆ ತಿರುವು ಸಿಕ್ಕಿದೆ. ಮುಖ್ಯಮಂತ್ರಿ ಫೇಸ್ಬುಕ್ ಪೇಜ್ ನಲ್ಲಿ ಶಾಸಕರ ಮೇಲೆ ದೂರಿದ್ದ ಮಹಿಳೆ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಶಾಸಕರು ನೀಡಿದ ದೂರನ್ನು ಅಧರಿಸಿ ಮಹಿಳೆ ಮತ್ತು ಇತರರ ವಿರುದ್ಧ 2ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಪೊಲೀಸರು FIR ಹಾಕಿದ್ದಾರೆ. ಆದರೆ, ಶಾಸಕರು, ಮಾಜಿ ಮಂತ್ರಿ ಶರಣ್ ಪ್ರಕಾಶ್ ಪಾಟೀಲ್ ಪಾತ್ರವಿರುವ ಬಗ್ಗೆ ಆರೋಪ ಮಾಡಿದ್ದರೂ, FIR ನಲ್ಲಿ ಕಾಂಗ್ರೆಸ್ ನಾಯಕನ ಹೆಸರನ್ನು ಉಲ್ಲೇಖ ಮಾಡಿಲ್ಲ.
ಫೆಬ್ರವರಿ ಐದರಂದು ಬೆಂಗಳೂರಿನ ವಿಧಾನ ಸೌಧ ಪೊಲೀಸರಿಗೆ ಶಾಸಕರು ನೀಡಿದ ದೂರಿನಲ್ಲಿ ಏನಿದೆ.
2009ರಲ್ಲಿ ಆ ಮಹಿಳೆ ಹೇಗೆ ಪರಿಚಯ ಆದರು ಎಂಬುದರಿಂದ ಹಿಡಿದು ಸಿಎಂಗೆ ಆಕೆ ದೂರು ನೀಡಿರುವ ಕ್ಷಣದವರೆಗೂ ವಿವರವಾಗಿ ಮಾಹಿತಿ ನೀಡಿದ್ದಾರೆ. ಆಕೆ 2 ಕೋಟಿಗೆ ಬೆದರಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ. ಈ ಬೆಳವಣಿಗೆ ಹಿಂದೆ ಮಾಜಿ ಮಂತ್ರಿ ಶರಣ್ ಪ್ರಕಾಶ್ ಪಾಟೀಲ್ ಪಾತ್ರ, ಕುಮ್ಮಕ್ಕಿನ ಬಗ್ಗೆ ರಾಜಕುಮಾರ್ ಪಾಟೀಲ್ ತೆಲಕೂರ್ ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿರುವ ಮಹಿಳೆಗೆ 1 ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಶಾಸಕರು ಆರೋಪ ಮಾಡಿದ್ದಾರೆ.