ಕೋವಿಡ್ ಕಾರಣದಿಂದ ಎಲ್ಲೆಲ್ಲೂ ಸರ್ಕಾರಿ ನೇಮಕಾತಿಗಳು ನಡೆದಿಲ್ಲ. 2 ವರ್ಷ ವಿವಿಧ ಹುದ್ದೆಗಳಿಗೂ ನೇಮಕಾತಿ ನಡೆದಿರಲಿಲ್ಲ. ಕೇಂದ್ರ ಲೋಕಸೇವಾ ಆಯೋಗ ಕೂಡ ಸಾಕಷ್ಟು ಹುದ್ದೆಗಳನ್ನ ಭರ್ತಿ ಮಾಡಿಲ್ಲ. ಇದರಿಂದ ಕೇಂದ್ರ ಸರ್ಕಾರಿ ನೌಕರಿ ಆಕಾಂಕ್ಷಿತರ ಬದುಕು ಬೀದಿಗೆ ಬಿದ್ದಿದೆ. ಒಂದು ಕಡೆ ವಯೋಮಿತಿ ಮೀರುತ್ತಿದೆ ಅನ್ನೋ ಆತಂಕ. ವಿವಿಧ ಸರ್ಕಾರಿ ಹುದ್ದೆಗೆ ತರಬೇತಿ ಪಡೆದು ಕಾಯುತ್ತಿದ್ದವವರಿಗೂ ನಿರಾಸೆ ಆಗಿದೆ.
ಹೀಗಾಗಿ ಕರ್ನಾಟಕದ ಮಹಿಳಾ ಅಭ್ಯರ್ಥಿಯೊಬ್ಬರು ದೆಹಲಿಯ ಬಿಜೆಪಿ ಕಚೇರಿ ಮುಂದೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಉದ್ದೇಶಿಸಿ ಅಂಗಲಾಚಿ ಬೇಡಿಕೊಂಡಿದ್ದಾರೆ.
कर्नाटका से आई ये लड़की बीजेपी के दफ्तर के बाहर मोदी जी और अमित शाह से गुहार लगा रही है की उन्हे यूपीएससी की परीक्षा में एक अतिरिक्त मौका मिले। उनका कहना है की कोविड की वजह से उनका दो साल खराब हुआ। पार्लियामेंट्री स्टैंडिंग कमिटी ने भी सिफारिश की है। #UPSCExtraAttempt pic.twitter.com/WAmDquH7h4
— Neo News Mathura (@Neo_NeoNews) July 17, 2022
UPSC ಪರೀಕ್ಷೆಯಲ್ಲಿ ತಮಗೆ ಹೆಚ್ಚುವರಿ ಅವಕಾಶ ನೀಡುವಂತೆ ಬಿಜೆಪಿ ಕಚೇರಿಯ ಹೊರಗೆ ನಿಂತು ಆ ಯುವತಿ ಮನವಿ ಮಾಡಿದ್ದಾರೆ. ಕೋವಿಡ್ನಿಂದಾಗಿ ತನ್ನ ಎರಡು ವರ್ಷಗಳು ಹಾಳಾಗಿವೆ ಎಂದು ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಗಮನ ಹರಿಸುವಂತೆ ಸಂಸದೀಯ ಸ್ಥಾಯಿ ಸಮಿತಿ ಕೂಡ ಶಿಫಾರಸ್ಸು ಮಾಡಿದೆ.