ತೆಲಂಗಾಣ: ಹೈದರಾಬಾದ್ ನ ಎಎಫ್ ಎಯಿಂದ ವಾಡಿಕೆಯ ತರಬೇತಿಯ ಸಮಯದಲ್ಲಿ ಪಿಲಾಟಸ್ ಪಿಸಿ 7 ಎಂಕೆ 2 ವಿಮಾನವೊಂದು ಇಂದು ಬೆಳಗ್ಗೆ ಅಪಘಾತಕ್ಕೆ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಪರಿಣಾಮವಾಗಿ ಇಬ್ಬರು ಭಾರತೀಯ ವಾಯುಪಡೆಯ ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ದುಂಡಿಗಲ್ ವಾಯುಪಡೆ ನಿಲ್ದಾಣದಿಂದ ಬೆಳಗ್ಗೆ ಹೊರಟ ವಿಮಾನವು ಮೇಡಕ್ ಜಿಲ್ಲೆಯ ತೂಪ್ರಾನ್ ಪಟ್ಟಣದ ಬಳಿಯ ರಾವೆಲ್ಲಿ ಪ್ರದೇಶದಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸುಟ್ಟು ಭಸ್ಮವಾಗಿದೆ.
ಇನ್ನು ಮೇಡಕ್ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಪ್ರಿಯದರ್ಶಿನಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ನಾಗರಿಕೆ ತೊಂದರೆಯಾಗಿಲ್ಲ. ಈ ಪ್ರಕರಣದ ಬಗ್ಗೆ ದುಂಡಿಗಲ್ನ ಐಎಎಫ್ ತಂಡವು ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
A Pilatus PC 7 Mk II aircraft met with an accident today morning during a routine training sortie from AFA, Hyderabad. It is with deep regret that the IAF confirms both pilots onboard the aircraft sustained fatal injuries. No damage to any civil life or property has been…
— Indian Air Force (@IAF_MCC) December 4, 2023