ಆರ್ಬಿಐ ವಾಪಸ್ ಪಡೆದಿರುವ 2 ಸಾವಿರ ರೂಪಾಯಿ ನೋಟುಗಳ ಪೈಕಿ ಶೇಕಡಾ 50ರಷ್ಟು ನೋಟು ಬ್ಯಾಂಕ್ಗೆ ವಾಪಸ್ ಆಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಈ ವರ್ಷದ ಮಾರ್ಚ್ 31ರ ಪ್ರಕಾರ 2 ಸಾವಿರ ರೂಪಾಯಿ ಮುಖಬೆಲೆಯೆ 3 ಲಕ್ಷದ 62 ಸಾವಿರ ಕೋಟಿ ರೂಪಾಯಿ ಮೊತ್ತದ ನೋಟು ಚಲಾವಣೆಯಲ್ಲಿತ್ತು. ನೋಟು ವಾಪಸ್ ಪಡೆಯುವ ಘೋಷಣೆಯ ಬಳಿಕ ಅವುಗಳಲ್ಲಿ 1 ಲಕ್ಷದ 80 ಸಾವಿರ ಕೋಟಿ ರೂಪಾಯಿಯಷ್ಟು ಮೊತ್ತದ 2 ಸಾವಿರ ರೂಪಾಯಿ ನೋಟು ವಾಪಸ್ ಬಂದಿದೆ
ಎಂದು ದಾಸ್ ಅವರು ಹೇಳಿದ್ದಾರೆ.
ವಾಪಸ್ ಆಗಿರುವ ನೋಟುಗಳಲ್ಲಿ ಶೇಕಡಾ 80ರಷ್ಟು ನೋಟು ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ ವಾಪಸ್ ಆಗಿದೆ. ಉಳಿದ ಶೇಕಡಾ 20ರಷ್ಟು ನೋಟನ್ನು ಬ್ಯಾಂಕ್ಗಳಲ್ಲಿ ಉಳಿದ ನೋಟುಗಳಿಗೆ ವಿನಿಯಮ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೇ 19ರಂದು ಆರ್ಬಿಐ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯುವ ನಿರ್ಧಾರವನ್ನು ಘೋಷಿಸಿತು.
ಸ್ವಚ್ಛ ನೋಟು ನೀತಿಯಡಿಯಲ್ಲಿ 2016ರಲ್ಲಿ ನೋಟು ನಿಷೇಧದ ವೇಳೆ ಪರಿಚಯಿಸಲಾಗಿದ್ದ 2 ಸಾವಿರ ರೂಪಾಯಿ ನೋಟನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. 2 ಸಾವಿರ ನೋಟಿನ ಬಾಳಿಕೆ ಅವಧಿ ಐದಾರು ವರ್ಷ ಆಗಿರುವ ಕಾರಣ ನೋಟು ವಾಪಸ್ ಪಡೆಯಲಾಗಿದೆ.
ADVERTISEMENT
ADVERTISEMENT