ಅರಣ್ಯ ಇಲಾಖೆ: ನೇರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

540 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅರಣ್ಯ ರಕ್ಷಕ) ನೇರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಗಳ ಕುರಿತು ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ, ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮೂಲ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ ಇ-ಮೇಲ್ ವಿಳಾಸದಿಂದ ಮಾತ್ರ ಆಕ್ಷೇಪಣೆಗಳನ್ನು ಈ ಕೆಳಕಂಡ ನಮೂನೆಯಲ್ಲಿ ಭರ್ತಿಮಾಡಿ ಈ ಕಚೇರಿಯ ನಿರ್ದಿಷ್ಟ ಇ-ಮೇಲ್ 540fg.rec.17.11.2023@gmail.com ದಿನಾಂಕ:20.10.2025ರೊಳಗೆ ಸಲ್ಲಿಸತಕ್ಕದ್ದು ಎಂದು ಅರಣ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

540 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅರಣ್ಯ ರಕ್ಷಕ
ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯ ಅಂಗವಾಗಿ ಅರಣ್ಯ
ಇಲಾಖೆಯ ಎಲ್ಲಾ 13 ವೃತ್ತಗಳಲ್ಲಿ ದಿನಾಂಕ:20.07.2025ರಂದು ನಡೆಸಲಾಗಿರುವ ಲಿಖಿತ ಪರೀಕ್ಷೆಯ
ನಂತರ ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019ರ
ಷಡ್ಯೂಲ್-ರ ಕ್ರ.ಸಂ. 14ರ ಕಂಡಿಕೆ (6) r/w (7)ರನ್ನಯ ವೃತ್ತವಾರು (ಕರಡು) 1:1 ತಾತ್ಕಾಲಿಕ ಆಯ್ಕೆ
ಪಟ್ಟಿಗಳನ್ನು ಅನುಬಂಧ-1 ರಿಂದ 13ರಲ್ಲಿ ಈ ಪ್ರಕಟಣೆಯೊಂದಿಗೆ ಅಭ್ಯರ್ಥಿಗಳ ಮಾಹಿತಿಗಾಗಿ
ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ www.aranya.gov.inನಲ್ಲಿ ಈ ಮೂಲಕ ಪ್ರಕಟಿಸಲಾಗಿದೆ.

ಪ್ರಕಟಿಸಿದ (ಕರಡು) 1:1 ತಾತ್ಕಾಲಿಕ ಆಯ್ಕೆ ಪಟ್ಟಿಗಳ ಕುರಿತು ಯಾವುದಾದರೂ ಆಕ್ಷೇಪಣೆ
ಇದ್ದಲ್ಲಿ, ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮೂಲ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ ಇ-ಮೇಲ್ ವಿಳಾಸದಿಂದ ಮಾತ್ರ ಆಕ್ಷೇಪಣೆಗಳನ್ನು ಈ ಕೆಳಕಂಡ ನಮೂನೆಯಲ್ಲಿ ಭರ್ತಿಮಾಡಿ ಈ ಕಚೇರಿಯ ನಿರ್ದಿಷ್ಟ ಇ-ಮೇಲ್ 540fg.rec.17.11.2023@gmail.com ದಿನಾಂಕ:20.10.2025ರೊಳಗೆ ಸಲ್ಲಿಸತಕ್ಕದ್ದು.

ಆಕ್ಷೇಪಣೆಗೆ ಸಮರ್ಥನೀಯ ದಾಖಲಾತಿಯ (ನೇಮಕಾತಿ ಅಧಿಸೂಚನೆಯಲ್ಲಿ ಸೂಚಿಸಿದಂತೆ ಸಕ್ಷಮ
ಪ್ರಾಧಿಕಾರವು ನೀಡಿದ ಹಾಗೂ ನೇಮಕಾತಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:30.12.2023ರೊಳಗೆ ಪಡೆದ ಹಾಗೂ ಸದರಿ ದಿನಾಂಕದಂದು ಚಾಲ್ತಿಯಲ್ಲಿರುವ ಪ್ರಮಾಣ ಪತ್ರ) ಪ್ರತಿಯನ್ನು ಅಡಕಗೊಳಿಸುವುದು ಕಡ್ಡಾಯವಾಗಿದೆ. (It is mandatory to attach the document/Certificate issued by the Competent Authority in proper format before the last date of submitting online applications, i.e., 30.12.2023 and with validity on that date as already specified in the Recruitment
Notification in support of the objection raised.)

ಈ ಮೇಲಿನ ನಮೂನೆಯನ್ನು ಹೊರತುಪಡಿಸಿ ಇತರೆ ವಿಧದಲ್ಲಿ / ಅಪೂರ್ಣ ಅಥವಾ ಅಸ್ಪಷ್ಟ
ರೀತಿಯಲ್ಲಿ / ಇತರೆ ಇ-ಮೇಲ್ ಅಥವಾ ಹಾರ್ಡ್ ಕಾಪಿಯಲ್ಲಿ ಅಥವಾ ಇತರೆ ವಿಧಾನದ ಮೂಲಕ / |
ಮೂಲ ಅರ್ಜಿಯಲ್ಲಿನ ಅಭ್ಯರ್ಥಿಯ ಇ-ಮೇಲ್ ಹೊರತುಪಡಿಸಿ ಇತರರಿಂದ / ನಿಗದಿತ ದಿನಾಂಕದ
ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಟಿಪ್ಪಣಿ: ಪ್ರಕಟಿಸಿದ ಪಟ್ಟಿಗಳು ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಸಲ್ಲಿಸಿರುವ ಆನ್‌ಲೈನ್ ಅರ್ಜಿಯಲ್ಲಿನ
ಮಾಹಿತಿ/ದಾಖಲಾತಿಗಳ ಆಧಾರದ ಮೇಲೆ ತಯಾರಿಸಿದ ತಾತ್ಕಾಲಿಕ ಆಯ್ಕೆ ಪಟ್ಟಿ ಮಾತ್ರವಾಗಿದ್ದು, ಅಭ್ಯರ್ಥಿಯ
ಆಯ್ಕೆಯು ನೇಮಕಾತಿ ಅಧಿಸೂಚನೆಯಲ್ಲಿ ನಮೂದಿಸಿರುವ ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿರುವುದನ್ನು ಖಚಿತಪಡಿಸುವುದಕ್ಕೆ ಒಳಪಟ್ಟಿರುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಂತದಲ್ಲಿ
ಅಭ್ಯರ್ಥಿಯು ಸಲ್ಲಿಸಿರುವ ಮಾಹಿತಿ/ದಾಖಲಾತಿಗಳು ತಪ್ಪು/ಸುಳ್ಳು/ಅಮಾನ್ಯ/ಅಸಿಂಧು ಎಂದು
ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವು ಸ್ವಯಂ ಚಾಲಿತವಾಗಿ ರದ್ದುಗೊಳ್ಳುತ್ತದೆ ಹಾಗೂ ಈ
ಕುರಿತು ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ

ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು), ಕರ್ನಾಟಕ ಹಾಗೂ ಆಯ್ಕೆ ಪ್ರಾಧಿಕಾರ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಪ್ರಕಟಣೆಯ ಪ್ರತಿ

540 FG Provisional List Publication_08-10-2025_12.53.03(1) (1)

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

ಮೂರು ನಗರಸಭೆ, ಮೂವತ್ತೆಂಟು ಪುರಸಭೆ ಹಾಗೂ ಹದಿನೇಳು ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು...

ಪ್ರತಿಕ್ಷಣ Exclusive: ಸ್ಪೀಕರ್‌ ಖಾದರ್‌ ವಿರುದ್ಧ ಅವಿಶ್ವಾಸ ನಿರ್ಣಯ..?

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ವಿಧಾನಸಭೆಯ ಸಭಾಧ್ಯಕ್ಷರಾಗಿರುವ (Karnataka Legislative...

ಬಿಹಾರದಲ್ಲಿ ಕಾಂಗ್ರೆಸ್‌ಗೆ ಬಾಸುಂಡೆ – ಸಿದ್ದರಾಮಯ್ಯ-ಯತೀಂದ್ರಗೆ ಹಾಲು ಕುಡಿದಷ್ಟೇ ಖುಷಿ..!

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ಬಿಹಾರದಲ್ಲಿ ಕಾಂಗ್ರೆಸ್‌ನ್ನು ಬಿಲ್‌ಕುಲ್‌ ನಂಬದ...

ಹಿರಿ ಖರ್ಗೆ ಅಧ್ಯಕ್ಷ – ಕಾಂಗ್ರೆಸ್‌ ಮತ್ತಷ್ಟು ನಾಶ – ಮಗ ಕಿರಿ ಖರ್ಗೆಗಷ್ಟೇ ಲಾಭ..!

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ಕಾಂಗ್ರೆಸ್‌ನವರ ಆದರಣೀಯ ನಾಯಕ ಜವಾಹರ್‌ಲಾಲ್‌...