ಬಿಗ್‌ಬಾಸ್ ಶೋ ನಡೆಯುವ ಜಾಲಿವುಡ್‌ಗೆ ಹಾಕಲಾಗಿದ್ದ ಬೀಗ ತೆಗೆಸುವುದಕ್ಕೆ ಸಂಧಾನ ನಡೆಸಿದ್ದು ಬೇರೆ ಯಾರ ಅಲ್ಲ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಮಾಜಿ ಅದ್ಯಕ್ಷ ಮೊಹಮ್ಮದ್ ನಲಪಾಡ್.
ಜಾಲಿವುಡ್‌ಗೆ ಹಾಕಲಾಗಿರುವ ಬೀಗ ತೆಗೆಯುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಆದೇಶ ನೀಡಿದ ಬೆನ್ನಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುವ ನಟ ಕಿಚ್ಚ ಸುದೀಪ್ ಅವರು ಟ್ವೀಟಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಬೆಂಬಲಿಸಿದ್ದಕೆ ಗೌರವಾನ್ವಿತ ಡಿ ಕೆ ಶಿವಕುಮಾರ್ ಸರ್ ಅವರಿಗೆ ಧನ್ಯವಾದಗಳು. ಇತ್ತೀಚಿನ ಗೊಂದಲಗಳಲ್ಲಿ ಬಿಗ್‌ಬಾಸ್ ಪಾತ್ರವಿಲ್ಲ ಎಂದು ಮನವರಿಕೆ ಮಾಡಿಕೊಂಡಿದ್ದಕ್ಕೆ ಅಧಿಕಾರಿಗಳಿಗೂ ಧನ್ಯವಾದಗಳು. ನನ್ನ ಕರೆಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದ್ದಕ್ಕೆ ಡಿಸಿಎಂ ಅವರಿಗೂ ಧನ್ಯವಾದಗಳು, ನಲಪಾಡ್ ಅವರಿಗೆ ಅವರ ಪ್ರಯತ್ನಕ್ಕಾಗಿ ಧನ್ಯವಾದಗಳು. ಬಿಗ್‌ಬಾಸ್ ೧೨ ಮುಂದುವರೆಯಲಿದೆ
ಎಂದು ಕಿಚ್ಚ ಸುದೀಪ್ ಅವರು ಪೋಸ್ಟ್ ಹಾಕಿದ್ದಾರೆ.


