ಪ್ರತಿಕ್ಷಣ Exclusive : ಜನಪ್ರಿಯ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ – FIR ದಾಖಲು

50 ಲಕ್ಷ ರೂಪಾಯಿ ವಿಮೆ ಹಣವನ್ನು ಲಪಟಾಯಿಸುವ ಸಲುವಾಗಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಸುಳ್ಳು ಮೆಡಿಕೋ ಲೀಗಲ್‌ ಕೇಸ್‌ (MLC) ವರದಿ ನೀಡಿರುವ ಡಾ.ಅಬ್ದುಲ್‌ ಬಶೀರ್‌ (Dr. Abdul Basheer) ಮಾಲೀಕತ್ವದ ಹಾಸನ ನಗರದ (Hassan City) ಜನಪ್ರಿಯ ಆಸ್ಪತ್ರೆಯ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ.

ಹಾಸನದ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಆನಂದ್‌ ಅವರು 2014ರ ಪ್ರಕರಣದಲ್ಲಿ ಜನಪ್ರಿಯ ಆಸ್ಪತ್ರೆಯ (Janapriya Hospital) ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ನ್ಯಾಯಾಲಯಕ್ಕೆ ಸುಳ್ಳು, ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ ವಂಚಿಸಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ಗೆ (FIR) ಆದೇಶಿಸಿದ ಬೆನ್ನಲ್ಲೇ ಜನಪ್ರಿಯ ಆಸ್ಪತ್ರೆಯ ಇನ್ನಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ.

Click the Link ಜನಪ್ರಿಯ ಆಸ್ಪತ್ರೆ Dr.ಬಶೀರ ಸಿಕ್ಕಿಬಿದ್ದಿದ್ದು ಹೇಗೆ..? ಕೋರ್ಟ್‌ನಲ್ಲೇ ಲಾಕ್‌..!

ಅಕ್ಟೋಬರ್‌ 30ರಂದು ಅರಸೀಕೆರೆ (Arasikere) ಗ್ರಾಮಾಂತರ ವೃತ್ತದ ಬಾಣಾವರ ಠಾಣೆಯಲ್ಲಿ (Banavara Station) ದಾಖಲಾಗಿರುವ ಎಫ್‌ಐಆರ್‌ (FIR) ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.

ಭಾರತೀಯ ದಂಡ ಸಂಹಿತೆಯ (IPC) ಕಲಂಗಳಾದ 193, 196, 200, 463, 465, 468, 471ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌ನ ಮ್ಯಾನೇಜರ್‌ (Reliance General Insurance)  ಆಗಿರುವ ನಿಖಿಲ್‌ (Nikhil) ಅವರು ಕೊಟ್ಟಿರುವ ದೂರಿನ ಮೇರೆಗೆ ಎಫ್‌ಐಆರ್‌ (FIR) ದಾಖಲಾಗಿದೆ.

(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್‌ ನಂಬರ್‌ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)

ಬಾಣಾವರದ ಮಾಸ್ತಿಹಳ್ಳಿಯ ಶಂಕರಪ್ಪ A1, ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ನಂದಿಹೊಸಹಳ್ಳಿ ಗ್ರಾಮದ ರಘು A2, ಅರಸೀಕೆರೆಯ ಶಬ್ಬೀರ್‌ A3, ನಯಾಜ್‌ ಪಾಷಾ A4, ಹಾಸನ ನಗರದಲ್ಲಿರುವ ಜನಪ್ರಿಯ ಆಸ್ಪತ್ರೆಯ ವೈದ್ಯ ಡಾ.ಮೊಹೀಷ್‌ ಅಹ್ಮದ್‌ A5, ಜನಪ್ರಿಯ ಆಸ್ಪತ್ರೆಯ ಆಡಳಿತಾತ್ಮಕ ಅಧಿಕಾರಿ A6 ಆರೋಪಿಗಳಾಗಿದ್ದಾರೆ.

ಏನಿದು ವಿಮೆ ಲಪಟಾಯಿಸುವ ಪ್ರಕರಣ..?

2019ರಲ್ಲಿ A2 ಆರೋಪಿಯಾಗಿರುವ ರಘು ಎಂಬಾತ ಅಪಘಾತ ಪ್ರಕರಣದಲ್ಲಿ ತನಗೆ 50 ಲಕ್ಷ ರೂಪಾಯಿ ವಿಮೆ ಪರಿಹಾರ ಕೊಡಿಸುವಂತೆ ಹಾಸನದ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದ.

ಈ ಅರ್ಜಿಯ ಹಿನ್ನೆಲೆಯಲ್ಲಿ ಹಾಸನ ನ್ಯಾಯಾಲಯ ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌ ಕಂಪನಿಗೆ ಸಮನ್ಸ್‌ ಜಾರಿ ಮಾಡಿತ್ತು.

ಈ ಸಮನ್ಸ್‌ ಹಿನ್ನೆಲೆಯಲ್ಲಿ ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌ ಕಂಪನಿಯ ಪರವಾಗಿ ಖಾಸಗಿ ತನಿಖಾ ತಂಡ ಲೆಜಿಟ್‌ ಇನ್ವೆಸ್ಟಿಗೇಷನ್‌ ಸರ್ವಿಸಸ್‌ (Legit Investigation Services) ತಂಡ ನಡೆಸಿದ ತನಿಖೆಯಲ್ಲಿ ವಂಚನೆಗೆ ಪಿತೂರಿ ನಡೆಸಿರುವುದು ಬಯಲಾಗಿದೆ.

ಈ ತನಿಖಾ ತಂಡ ಅರಸೀಕೆರೆ ಗ್ರಾಮಾಂತರ ವೃತ್ತ ಬಾಣಾವರ ಠಾಣೆಯಲ್ಲಿ A1 ಆರೋಪಿ ಶಂಕರಪ್ಪ ನೀಡಿದ್ದ ದೂರಿನ ಆಧಾರದಲ್ಲಿ ದಾಖಲಾಗಿದ್ದ FIR ಮಾಹಿತಿಯನ್ನು ಸಂಗ್ರಹಿಸಿತ್ತು. ಈ ಮಾಹಿತಿ ಆಧರಿಸಿ ಕಂಪನಿಯ ತಂಡ ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ದಾಖಲೆಗಳ ಮಾಹಿತಿಯನ್ನೂ ಸಂಗ್ರಹಿಸಿತ್ತು.

ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗಿದ್ದ MLC (Medico Legal Case) ವರದಿ ಪ್ರಕಾರ A2 ಆರೋಪಿ ರಘು ಬಾಳೇನಹಳ್ಳಿಯಲ್ಲಿ ಮರದ ಮೇಲಿಂದ ಬಿದ್ದು, ಆತನನ್ನು ಆತನ ಚಿಕ್ಕಪ್ಪ ಮಹೇಶ್‌ ಎನ್ನುವವರು ಕರೆದುಕೊಂಡು ಬಂದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಎಂಎಲ್‌ಸಿ ಮಾಡಿಸಿದ್ದರು.

ಆದರೆ A2 ಆರೋಪಿ ಗಾಯಾಳು ರಘುವಿಗೆ ಜನಪ್ರಿಯ ಆಸ್ಪತ್ರೆಯಲ್ಲಿ ಸುಳ್ಳು MLC ಮಾಡಿಸಿ ಕೇಸ್‌ ಮಾಡಿಸಲಾಗಿತ್ತು. ಈ ಬಗ್ಗೆ ರಘುವಿಗೆ ಮಾಹಿತಿಯನ್ನು ನೀಡಿದ ಬಳಿಕ ಆತ ಹಾಸನ ನ್ಯಾಯಾಲಯದಲ್ಲಿ ಹಾಕಿದ್ದ ಅಪಘಾತ ಪರಿಹಾರ ವಿಮೆ ಅರ್ಜಿಯನ್ನು ಹಿಂಪಡೆದಿದ್ದ.

ಆದರೆ 2023ರಲ್ಲಿ ಅಂದರೆ 2 ವರ್ಷಗಳ ಹಿಂದೆ ಮತ್ತೆ ಅರಸೀಕೆರೆಯ ಹಿರಿಯ ಸಿವಿಲ್‌ ಜಡ್ಜ್‌ ಮತ್ತು JMFC ನ್ಯಾಯಾಲಯದಲ್ಲಿ ಅಪಘಾತ ಪರಿಹಾರ ವಿಮೆಗಾಗಿ ಅರ್ಜಿಯನ್ನು ಹಾಕಿದ್ದ A2 ಆರೋಪಿ ರಘು.

ಈ ಅಪಘಾತ ವಿಮೆ ಪರಿಹಾರ ಪಡೆದುಕೊಳ್ಳುವ ಸಲುವಾಗಿ A2 ಆರೋಪಿ ರಘು ಮರದ ಮೇಲಿಂದ ಬಿದ್ದು ಹಾಸನದ ಆಸ್ಪತ್ರೆಗೆ ದಾಖಲಾದ ಮರು ದಿನ ಅಂದರೆ 2019ರ ಜನವರಿ 26ರಂದು ರಘು ಅಪಘಾತದಿಂದ ಗಾಯಗೊಂಡಿದ್ದಾನೆ ಎಂದು ಸುಳ್ಳು MLC ವರದಿ ಸೃಷ್ಟಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಶಂಕರಪ್ಪ, ಮರದ ಮೇಲಿಂದ ಬಿದ್ದಿದ್ದ ರಘು, ಅಶೋಕ ಲೈಲ್ಯಾಂಡ್‌ ವಾಹನದ ಮಾಲೀಕ ನಯಾಜ್‌ ಪಾಷಾ ಮತ್ತು ಜನಪ್ರಿಯ ಆಸ್ಪತ್ರೆಯ ವೈದ್ಯ ಡಾ.ಮೊಹಿಷ್‌ ಅಹ್ಮದ್‌ ಮತ್ತು ಜನಪ್ರಿಯ ಆಸ್ಪತ್ರೆಯ ಆಡಳಿತಾಧಿಕಾರಿ ವಿರುದ್ಧ ನೀಡಲಾದ ದೂರಿನಡಿ FIR ದಾಖಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

Bengaluru: ಮ್ಯಾನೇಜರ್‌ನನ್ನೇ ಕೊಂದ ಸಹೋದ್ಯೋಗಿ

ಲೈಟ್‌ ಆಫ್‌ ಮಾಡುವ ವಿಷಯದಲ್ಲಿ ನಡೆದ ಗಲಾಟೆಯಲ್ಲಿ ಸಹೋದ್ಯೋಗಿಯೊನ್ನ ತನ್ನ ಮ್ಯಾನೇಜರ್‌ನನ್ನೇ...

ಪ್ರತಿಕ್ಷಣ Exclusive: ಹಾಸನದ MMM ಆಸ್ಪತ್ರೆ ವಿರುದ್ಧ FIR

ಹಾಸನ ನಗರದ (Hassan City) ಸಂಪಿಗೆ ರಸ್ತೆಯಲ್ಲಿರುವ (Sampige Road) ಮಹಾಲಕ್ಷ್ಮೀ...

ಜನಪ್ರಿಯ ಆಸ್ಪತ್ರೆ Dr.ಬಶೀರ ಸಿಕ್ಕಿಬಿದ್ದಿದ್ದು ಹೇಗೆ..? ಕೋರ್ಟ್‌ನಲ್ಲೇ ಲಾಕ್‌..!

ನ್ಯಾಯಾಲಯವನ್ನೇ ಯಾಮಾರಿಸಲು ಹೋಗಿ ನ್ಯಾಯಾಲಯದ ಕೈಯಲ್ಲೇ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಸನ...

ಬೆಂಗಳೂರಿನ PGಗಳಿಗೆ 1 ವಾರದ ಡೆಡ್‌ಲೈನ್‌

ಒಂದು ವಾರದೊಳಗೆ ಎಲ್ಲಾ PGಗಳು (Paying Guest) ಉದ್ದಿಮೆ ಪರವಾನಿಗೆ ಪತ್ರವನ್ನು...