ಬ್ಲಾಕ್ ಲೆನ್ಸ್ ಕ್ರಿಯೇಷನ್ (Block Lence Creation) ಅವರ ಮೊದಲ ಕಿರುಚಿತ್ರದ ಪ್ರಥಮ ಪೋಸ್ಟರ್ನ್ನು ಇಂದು ಬಿಡುಗಡೆ ಮಾಡಲಾಯಿತು.
ಮಂಗಳೂರಿನ ಕುಡ್ಲ ಪ್ಯಾರಾಡೈಸ್ ಐಲ್ಯಾಂಡ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಶ್ರೀಯುತ ಅರುಣ್ ಜೆ. ಚಕ್ರವರ್ತಿ ಯವರು ಮತ್ತು ಶ್ರೀ ಗೋಪಾಲಕೃಷ್ಣ ಕುಂದರ್ ರವರು 23/3 ಕಿರುಚಿತ್ರದ ಪ್ರಥಮ ಪೋಸ್ಟರ್ನ್ನು ಅನಾವರಣಗೊಳಿಸಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಎಸಿಪಿ ಶ್ರೀ ಪರಮೇಶ್ವರ್ ಹೆಗಡೆ, ಎಸಿಪಿ ಶ್ರೀ ಎಂ ಎ ನಟರಾಜ್, ಎಸಿಪಿ ಶ್ರೀ ದಿನಕರ್ ಶೆಟ್ಟಿ, ಎಸಿಪಿ ಶ್ರೀ ಮಹೇಶ್ ಕುಮಾರ್, ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ, ಯಕ್ಷರಂಗದ ಚಾರ್ಲಿ ಚಾಪ್ಲಿನ್ ಬಿರುದಂಕಿತ ಶ್ರೀ ಸೀತಾರಾಮ್ ಕುಮಾರ್ ಕಟೀಲ್, ಶ್ರೀ ಮಾಧವ ನಾಯ್ಕ್ ಅಡ್ಯಾರ್, ಶ್ರೀಮತಿ ನಿರ್ಮಲಾ ಗೋಪಾಲ್, ಕುಮಾರಿ ಸ್ವಾತಿ, ಶ್ರೀ ರೋಹಿತ್ ಇತರರು ಇದ್ದರು.
23/3 ಎಂಬ ಕಿರುಚಿತ್ರವನ್ನು ಶ್ರೀ ಶಿವರಾಜ್ ಕುತ್ತೆತ್ತೂರು ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪರಿಕಲ್ಪನೆ ಹಾಗೂ ಮುಖ್ಯ ಭೂಮಿಕೆಯಲ್ಲಿ ಶ್ರೀಯುತ ಶ್ರೀ ಜೆ.ಬಂಗೇರ ಹಾಗೂ ಅಶೋಕ್ ಪೂಜಾರಿ ನಟಿಸಿದ್ದಾರೆ. ನವನೀತ್ ವಿಠ್ಠಲ್ ಈ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.
ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಕಿರುಚಿತ್ರ 23/3 ಕಿರುಚಿತ್ರವು ಅತೀ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಶ್ರೀ ಸುನಾದ್ ಗೌತಮ್ ಸಂಗೀತ ನೀಡಿದ್ದು, ಪೋಸ್ಟರನ್ನು ಶ್ರೀ ಗುರುಪ್ರಸಾದ್ ಅವರು ರಚಿಸಿದ್ದಾರೆ. ಅಭಿ ಬೋಲಿಯಾರ್, ರಂಜಿತ್ ಕೋಟ್ಯಾನ್, ವಿಕ್ರಮ್ ರಾವ್, ರಿಯಾಜ್ ಅವರು ಚಿತ್ರಕ್ಕೆ ಸಹಕರಿಸಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಲಕ್ಷ್ಮೀಶ್ ಸುವರ್ಣ ಅವರು ನಡೆಸಿಕೊಟ್ಟರು.
https://youtu.be/ZR4gDXUKZ98