ರಾಜ್ಯದ ಮುಖ್ಯಮಂತ್ರಿ ಮಾಡಲು 2500 ಕೋಟಿ ರೂಪಾಯಿ ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಈಗ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳು ಬಿಜೆಪಿ ಹೈಕಮಾಂಡ್ ಗೂ ಸಾಕಷ್ಟು ಮುಜುಗರ ತಂದೊಡ್ಡಿದೆ. ಇದೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿಗೆ ಸಿಗುವ ಒಂದು ಸಣ್ಣ ಅವಕಾಶವನ್ನು ಬಿಡಲೋಲ್ಲದ ಟಿ ಆರ್ ಎಸ್ ಪಕ್ಷದ ತಂದೆ ಮಕ್ಕಳು ಈಗ ಯತ್ನಾಳ್ ಹೇಳಿಕೆಯನ್ನು ಪ್ರಸ್ತಾಪಿಸಿ ಕಾಲು ಎಳೆಯುವ ಕೆಲಸ ಮಾಡಿದ್ದರೆ.
IT ಮಂತ್ರಿ ಕೆ ಟಿ ಆರ್ ಟ್ವೀಟ್ ಮಾಡಿ, ಹಲೋ ನಡ್ಡಾಜಿ,
❇️ ಕರ್ನಾಟಕದ ಮುಖ್ಯಮಂತ್ರಿ ಮಾಡಲು 2500 ಕೋಟಿ ರೂಪಾಯಿ ನೀಡಬೇಕೆಂದು ನಿಮ್ಮದೇ ಬಿಜೆಪಿ ಪಕ್ಷದ ಶಾಸಕ ಹೇಳುತ್ತಾರೆ.
🙄
❇️ ನಮ್ಮನ್ನು 40% ಕಮಿಷನ್ ಕೊಡಬೇಕು ಎಂದು ಕೇಳುತ್ತಾರೆ ಅಂತಾ ಗುತ್ತಿಗೆದಾರರು ಆರೋಪ ಮಾಡುತ್ತಾರೆ!
❇️ ಹಿಂದೂ ಮಠದ ಸ್ವಾಮೀಜಿ ಕೂಡಾ 30 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಾರೆ!
ED, IT, CBI ಗೆ ಏನಾದರೂ ಹೇಳುವುದು ಇದೆಯಾ? ಆದೇಶ ಏನಾದರೂ ನೀಡುತ್ತೀರಾ ನಡ್ಡಾಜಿ.?
ಎಂದು ಕೆ ಟಿ ಆರ್ ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಕೆಣಕಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ದಿ ವೈರ್ ಪ್ರಕಟಿಸಿರುವ, ನಡ್ದಾ ಆರೋಗ್ಯ ಸಚಿವರಾಗಿದ್ದಾಗ, ಇಲಾಖೆಯಲ್ಲಿ ನಡೆದ 7000 ಕೋಟಿ ಹಗರಣದ ವರದಿ ಟ್ಯಾಗ್ ಮಾಡಿರುವ ಕೆ ಟಿ ಆರ್, ಅರೇ ಇದೇಗೆ ಸಾಧ್ಯ? ನಡ್ಡಾಜಿ ಸತ್ಯ ಹರಿಶ್ಚಂದ್ರನ ಕಸಿನ್ ಅಲ್ವಾ ಎಂದು ವ್ಯಂಗ್ಯ ಮಾಡಿದ್ದಾರೆ.