ರಾಜಸ್ಥಾನದಲ್ಲಿ 3 ಇಡಿಯಟ್ಸ್ ಸಿನಿಮಾ ಮಾದರಿಯ ವಿಚಿತ್ರ ಪ್ರಕರಣವೊಂದು ನಡೆದಿದೆ.
ಆಸ್ಪತ್ರೆಯೊಂದರಲ್ಲಿ ವ್ಹೀಲ್ಚೇರ್ ಲಭ್ಯವಿಲ್ಲದ ಕಾರಣ ತಂದೆಯೊಬ್ಬ ತನ್ನ ಗಾಯಾಳು ಪುತ್ರನನ್ನು ಸ್ಕೂಟರ್ ಮೇಲೆ ಕೂರಿಸಿಕೊಂಡು ಆಸ್ಪತ್ರೆಯ ಮೂರನೇ ಮಹಡಿ ತಲುಪಿದ್ದಾರೆ.
ಕೋಟಾ ಜಿಲ್ಲೆಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋಟಾದ ಮನೋಜ್ ಜೈನ್ ವೃತ್ತಿರೀತ್ಯಾ ವಕೀಲರು. ಇತ್ತೀಚಿಗೆ ಅವರ ಮಗನಿಗೆ ಕಾಲು ಫ್ರ್ಯಾಕ್ಚರ್ ಆಗಿತ್ತು. ಬ್ಯಾಂಡೇಜ್ ಬದಲಿಸಲು ಸ್ಥಳೀಯ ಎಂಬಿಎಸ್ ಆಸ್ಪತ್ರೆಗೆ ಕರೆತಂದಿದ್ದರು.
ಆರ್ಥೋಪೆಡಿಕ್ ಸೆಕ್ಷನ್ ಮೂರನೇ ಫ್ಲೋರ್ನಲ್ಲಿ ಇತ್ತು. ಆದರೆ, ಮೂರನೇ ಮಹಡಿಗೆ ಕರೆದೊಯ್ಯಲು ಆಸ್ಪತ್ರೆಯಲ್ಲಿ ವ್ಹೀಲ್ಚೇರ್ ಲಭ್ಯ ಇರಲಿಲ್ಲ.
ಹೀಗಾಗಿ ತಮ್ಮ ಪುತ್ರನನ್ನು ಸ್ಕೂಟರ್ನಲ್ಲಿ ಕೂರಿಸಿಕೊಂಡ ಮನೋಜ್ ಜೈನ್, ಲಿಫ್ಟ್ಗೆ ಎಂಟ್ರಿಕೊಟ್ಟರು.
ಮೂರನೇ ಮಹಡಿಯಲ್ಲಿ ಮಗನಿಗೆ ಕಾಲಿಗೆ ಡ್ರೆಸ್ಸಿಂಗ್ ಮಾಡಿದ ಮನೋಜ್ ಜೈನ್ ಲಿಫ್ಟ್ ಮೂಲಕವೇ ಬೈಕಲ್ಲಿ ವಾಪಸ್ ಆದರು.
The way people are not surprised or shock it seems this is regular affair at Government hospital in Kota, Rajasthan pic.twitter.com/YI3JG6HQqD
— नंदिता ठाकुर 🇮🇳 (@nanditathhakur) June 17, 2023