ಬಿಹಾರದಲ್ಲಿ 4 ಜನ ಎಐಎಂಐಎಂ ಶಾಸಕರು ಆರ್ಜೆಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಹಾರದ ವಿದಾನಸಭೆಯ ವಿರೋಧ ಪಕ್ಷಕ್ಕೆ ಎಐಎಂಐಎಂ ಪಕ್ಷದ ಶಾಸಕರಾದ ಶಹನವಾಜ್, ಮೊಹಮ್ಮದ್ ಅನ್ಜರ್ ನಯೀಮ್, ಮಹಮ್ಮದ್ ಇಜಾರ್ ಅಸ್ಫಿ ಮತ್ತು ಸೈಯದ್ ರುಕುದ್ದೀನ್ ಇಂದು ಸೇರ್ಪಡೆಯಾಗಿದ್ದಾರೆ.
2020 ರ ನವೆಂಬರ್ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 5 ಜನ ಎಐಎಂಐಎಂ ಶಾಸಕರು ಗೆಲುವು ಸಾಧಿಸಿದ್ದರು. ಇದೀಗ, ಬಿಹಾರ ಎಐಎಂಐಎಂನಲ್ಲಿ ಅಕ್ತರುಲ್ ಇಮ್ರಾನ್ ಏಕಾಂಗಿ ಶಾಸಕರಾಗಿದ್ದಾರೆ.
ವಿರೋಧ ಪಕ್ಷ ರಾಷ್ಟ್ರೀಯ ಜನತಾದಳ(ಆರ್ಜೆಡಿ)ದ ನಾಯಕರಾಗಿರುವ ತೇಜಸ್ವಿ ಯಾದವ್ ಅವರು ಈ ನಾಲ್ವರು ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.