ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ಅಧೀರ್ರಂಜನ್ ಚೌಧರಿ ಒಳಗೊಂಡಂತೆ ಮತ್ತೆ 33 ಮಂದಿ ಸಂಸದರನ್ನು ಸದನದಿಂದ ಅಮಾನತು ಮಾಡಲಾಗಿದೆ. ಇವತ್ತು ಸಂಸದರನ್ನು ಅಮಾನತು ಮಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆದೇಶಿಸಿದ್ದಾರೆ.
ಈ ಮೂಲಕ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಿಂದ ಅಮಾನತ್ತಾದ ವಿರೋಧ ಪಕ್ಷದ ಸಂಸದರ ಸಂಖ್ಯೆ 47ಕ್ಕೆ ಏರಿಕೆ ಆಗಿದೆ.
ಡಿಸೆಂಬರ್ 14ರಂದು 14 ಮಂದಿ ಲೋಕಸಭಾ ಸಂಸದರನ್ನು ಅಮಾನತು ಮಾಡಲಾಗಿತ್ತು.
ಡಿಸೆಂಬರ್ 13ರಂದು ಸಂಸತ್ ಆವರಣ ಮತ್ತು ಲೋಕಸಭೆಯೊಳಗೆ ಆಗಿರುವ ಭದ್ರತಾ ಲೋಪ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕೆಂದು ಆಗ್ರಹಿಸಿ ಡಿಸೆಂಬರ್ 14ರಿಂದ ಲೋಕಸಭೆ ಮತ್ತು ರಾಜ್ಯಸಭೆಯೊಳಗೆ ವಿರೋಧ ಪಕ್ಷಗಳು ಹೋರಾಟ ತೀವ್ರಗೊಳಿಸಿವೆ.
ADVERTISEMENT
ADVERTISEMENT