ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಪ್ರಾಯೋಗಿಕ ಯೋಜನೆಯಡಿಯಲ್ಲಿ 5G ನೆಟ್ವರ್ಕ್ ಅನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಪಾತ್ರವಾಗಿದೆ.
ಎಂಜಿ ರಸ್ತೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ರಿಲಯನ್ಸ್ ಜಿಯೋ 5ಜಿ ನೆಟ್ವರ್ಕ್ ಸ್ಥಾಪಿಸಿದ್ದು ಸುಮಾರು 200 ಮೀಟರ್ ವ್ಯಾಪ್ತಿಗೆ 5G ನೆಟ್ವರ್ಕ್ ಸಿಗುತ್ತಿದ್ದು 1.45 Gbps ಡೌನ್ಲೋಡ್ ಮತ್ತು 65 Mbps ಅಪ್ಲೋಡ್ ವೇಗವನ್ನು ಸಾಧಿಸಿದೆ. ಇದು 4Gಗಿಂತ 50 ಪಟ್ಟು ವೇಗವಾಗಿದೆ.
ಪ್ರಾಯೋಗಿಕ ಪರೀಕ್ಷೆ ಬಗ್ಗೆ ಟ್ವೀಟ್ ಮಾಡಿರುವ ಬಿಎಂಆರ್ಸಿಎಲ್ ಎಂಜಿ ರಸ್ತೆಯಲ್ಲಿ 5 ಜಿ ನೆಟ್ವರ್ಕ್ ಪರೀಕ್ಷೆ ನಡೆದಿದ್ದು ಇದು 4ಜಿ ನೆಟ್ವರ್ಕ್ ಗಿಂತಲೂ 50 ಪಟ್ಟು ವೇಗವಾಗಿದೆ ಎಂದು ಟ್ವೀಟಿಸಿದೆ.
BMRCL has become the first Metro in India to test 5G network under a Pilot Project of TRAI. The 5G network radiated in 200 m radius, deployed by Reliance Jio at M G Rd station. The test has achieved 1.45 Gbps Download and 65 Mbps Upload speeds, making it 50 times faster than 4G. pic.twitter.com/jCtFmhOjmH
— ನಮ್ಮ ಮೆಟ್ರೋ (@OfficialBMRCL) July 22, 2022