ADVERTISEMENT
ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ.
ಸೈನಿಕರನ್ನು ಕರೆದುಕೊಂಡು ಹೋಗುತ್ತಿದ್ದ ಸೇನಾ ವಾಹನ 300 ಅಡಿಗಳ ಪ್ರಪಾತಕ್ಕೆ ಉರುಳಿಬಿದ್ದ ಕಾರಣ ಆ ವಾಹನದಲ್ಲಿದ್ದ ಐವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಫೂಂಚ್ ಜಿಲ್ಲೆಯ ಘರೋಹಾ ಪ್ರದೇಶದಲ್ಲಿ ಸಂಜೆ 5 ಗಂಟೆ 20 ನಿಮಿಷದ ವೇಳೆ ದುರಂತ ಸಂಭವಿಸಿದೆ.
ಈ ವಾಹನದ ಜೊತೆಗೆ ಇತರೆ ಐದು ಸೇನಾ ವಾಹನಗಳು ಒಟ್ಟಿಗೆ ಸಾಗುತ್ತಿದ್ದವು. ಈ ಆರು ಸೇನಾ ವಾಹನಗಳು ಬನೋಯಿ ಜಿಲ್ಲೆಯತ್ತ ತೆರಳುತ್ತಿದ್ದವು.
ADVERTISEMENT