ಕಚ್ಚಾ ಬದಾಮ್ ಖ್ಯಾತಿಯ ಗಾಯಕ ‘ಭುವನ್ ಬಡ್ಯಾಕರ್’ ಅವರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈರಲ್ ಆಗಿರುವ ಬೆಂಗಾಲಿ ಹಾಡನ್ನು ಹಾಡಿದ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಹೊಸದಾಗಿ ಖರೀದಿಸಿದ್ದ ಕಾರ್ ಓಡಿಸಲು ಕಲಿಯುತ್ತಿದ್ದಾಗ ಅಪಘಾತವಾಗಿ ಎದೆಗೆ ಪೆಟ್ಟಾಗಿ ಗಾಯಗೊಂಡಿದ್ದು, ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಭುವನ್ ಬಡ್ಯಾಕರ್ ಅವರ ‘ಕಚ್ಚಾ ಬದಮ್’ ಹಾಡು ವೈರಲ್ ಆದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದರು. ಅವರು ಬೀರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಕಡಲೆಕಾಯಿ ಮಾರಾಟ ಮಾಡುವಾಗ ಖರೀದಿದಾರರನ್ನು ಆಕರ್ಷಿಸಲು ಹಾಡನ್ನು ರಚಿಸಿದರು. ಅವರ ಹಾಡನ್ನು ರೀಮಿಕ್ಸ್ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೋ ಬರೋಬ್ಬರಿ 50 ಮಿಲಿಯನ್ ವೀಕ್ಷಣೆ ಕಂಡಿದೆ.