5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಅಂತ್ಯ ಆಗಿದೆ. ಕೇಂದ್ರ ಸರ್ಕಾರ 5ಜಿ ತರಂಗಾಂತರ ಹಂಚಿಕೆಯಿಂದ 1 ಲಕ್ಷದ 50 ಸಾವಿರದ 173 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ.
40 ಸುತ್ತು ನಡೆದ ಹರಾಜು ಪ್ರಕ್ರಿಯೆಯ ಕೊನೆಯ ದಿನವಾದ ಇವತ್ತು ಕೇವಲ 43 ಕೋಟಿ ರೂಪಾಯಿಯಷ್ಟೇ ಸಂಗ್ರಹಿಸಿದೆ.
ಮೂಲಗಳ ಪ್ರಕಾರ ದೈತ್ಯ ಉದ್ಯಮಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ 80 ಸಾವಿರ ಕೋಟಿ ರೂಪಾಯಿ ಮೊತ್ತದ ಬಿಡ್ಡಿಂಗ್ ಮಾಡಿದೆ.
ಭಾರ್ತಿ ಏರ್ಟೆಲ್, ವೋಡಾಫೋನ್ ಐಡಿಯಾ ಮತ್ತು ಟೆಲಿಕಾಂ ಕ್ಷೇತ್ರಕ್ಕೆ ಈ ಬಾರಿ ಹೊಸದಾಗಿ ಪ್ರವೇಶಿಸಿರುವ ಅದಾನಿ ಕಂಪನಿ ಕೂಡಾ ಬಿಡ್ಡಿಂಗ್ನಲ್ಲಿ ಪಾಲ್ಗೊಂಡಿತ್ತು.