ಸೈನಿಕರು ತೆರಳುತ್ತಿದ್ದ ವಾಹನ ನದಿಗೆ ಉರುಳಿ ಏಳು ಜನ ಸೈನಿಕರು ಪ್ರಾಣಕಳೆದುಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಲಡಾಖ್ ಹತ್ತಿರದ ಜಾರ್ಜ್ ಎಂಬಲ್ಲಿ ಶಿಓಕ್ ನದಿಗೆ ಸೈನಿಕರಿದ್ದ ವಾಹನ ಬಿದ್ದಿದೆ ಎಂದು ಅಧಿಕೃತವಾಗಿ ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಈ ಸೇನಾ ವಾಹನದಲ್ಲಿ 26 ಸೈನಿಕರು ಪ್ರಯಾಣಿಸುತ್ತಿದ್ದರು. ಪರ್ತಾಪುರದ ಟ್ರಾನ್ಸಿಟ್ ಕ್ಯಾಂಪ್ನಿಂದ ಹನೀಪ್ನ ಸಬ್ ಸೆಕ್ಟರ್ಗೆ ಸೈನಿಕರು ವಾಹನದಲ್ಲಿ ಪ್ರಯಾಣಿಸುತ್ತಿದ್ದರು.
ಸುಮಾರು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ತೋಸಿಯಿಂದ 25 ಕಿ.ಮೀ ದೂರದಲ್ಲಿ ವಾಹನ ಸ್ಕಿಡ್ ಆಗಿ ಶಿಓಕ್(50-60 ಅಡಿ) ನದಿಗೆ ಬಿದ್ದಿದೆ. ಈ ಘಟನೆಯಲ್ಲಿ ಎಲ್ಲಾ ಸೈನಿಕರೂ ಗಾಯಗೊಂಡಿದ್ದಾರೆ ಎಂದು ಸೇನೆ ವಕ್ತಾರರು ಹೇಳಿದ್ದಾರೆ.
ರಕ್ಷಣಾ ಕಾರ್ಯಚರನೆಯನ್ನು ವೇಗವಾಗಿ ಮಾಡಲಾಗಿದೆ. ಎಲ್ಲಾ ಸೈನಿಕರನ್ನು ಪರ್ತಾಪರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರ್ಘಟನೆಯಲ್ಲಿ 7 ಜನ ಸೈನಿಕರು ಪ್ರಾಣಕಳೆದುಕೊಂಡಿದ್ದಾರೆ. ಉಳಿದ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದೇವೆ. ಅವಶ್ಯಕತೆ ಬಿದ್ದರೆ ವಾಯು ಸೇನೆಯನ್ನು ಬಳಸಿಕೊಂಡು ಸೈನಿಕರನ್ನು ಪಶ್ಚಿಮ ಕಮಾಂಡ್ನ ತುರ್ತು ನಿಗಾ ಘಟಕಕ್ಕೆ ಕರೆದೊಯ್ಯಲಾಗುವುದು ಎಂದು ಸೇನಾ ವಕ್ತಾರರು ಹೇಳಿದ್ದಾರೆ.