ಜಾತ್ರೆಯೊಂದರಲ್ಲಿ ಪಾನಿ ಪುರಿ ತಿಂದು ಸುಮಾರು 97 ಮಕ್ಕಳು ಅಸ್ವಸ್ಥಗೊಂಡ ಘಟನೆ ಮಧ್ಯಪ್ರದೇಶದ ಮಂಡಲಾ ಜಿಲ್ಲೆಯ ಸಿಂಗಾರ್ಪುರ್ ಪ್ರದೇಶದಲ್ಲಿ ನಡೆದಿದೆ.
ವಿಷಾಹಾರ ಸೇವನೆಯಿಂದ 97 ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರು ಅಪಾಯದಿಂದ ಪಾರಾಗಿದ್ದಾರೆ. ಅಸ್ವಸ್ಥಗೊಂಡ ಎಲ್ಲ ಮಕ್ಕಳು ಒಂದೇ ಅಂಗಡಿಯಲ್ಲಿ ಪಾನಿ ಪುರಿ ತಿಂದಿದ್ದರು. ಶನಿವಾರ ಸಂಜೆ ಸುಮಾರು 7.30ಕ್ಕೆ ಮಕ್ಕಳಿಗೆ ವಾಂತಿ ಮತ್ತು ಹೊಟ್ಟೆನೋವು ಕಾಣಸಿಕೊಂಡಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೆ.ಆರ್.ಶಾಖ್ಯ ಹೇಳಿದ್ದಾರೆ.
ಪಾನಿ ಪುರಿ ಮಾರಾಟಗಾರನನ್ನು ಬಂಧಿಸಲಾಗಿದ್ದು, ಆತ ಬಳಸುತ್ತಿದ್ದ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.