ರಾಜ್ಯ ಸರ್ಕಾರ ಕೊರೋನಾ ನಿರ್ಬಂಧಕ್ಕಾಗಿ ಜಾರಿ ಮಾಡಿದ್ದ ನೈಟ್ ಕರ್ಪ್ಯೂ ಹಾಗೂ ಇತರೆ ನಿರ್ಬಂಧಗಳನ್ನು ಹಿಂತೆಗೆದುಕೊಂಡು ಆದೇಶ ಹೊರಡಿಸಿದೆ.
ಆ ಮೂಲಕ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಜನವರಿ 31 ರ ನಂತರ ರಾಜ್ಯದಲ್ಲಿ ಯಾವುದೇ ನೈಟ್ ಕರ್ಪ್ಯೂ ಇರುವುದಿಲ್ಲ. ಈಗಾಗಲೇ ವಾರಾಂತ್ಯ ಕರ್ಪ್ಯೂವನ್ನು ಸರ್ಕಾರ ಹಿಂತೆಗೆದುಕೊಂಡಿತ್ತು.
ನೈಟ್ ಕರ್ಪ್ಯೂ ಅಲ್ಲದೆ, ಹೋಟೆಲ್ ಹಾಗೂ ದೇವಸ್ಥಾನ, ಮಂದಿರ, ಮಸೀದಿಗಳಲ್ಲಿ ಪೂಜೆ, ಪ್ರಾರ್ಥನೆ, ಸೇವೆಗೆ ವಿಧಿಸಿದ್ದ ನಿರ್ಬಂಧವನ್ನು ಸರ್ಕಾರ ಹಿಂತೆಗೆದುಕೊಂಡಿದೆ. ಮದುವೆ ಹಾಗೂ ಹೊರಾಂಗಣದ ಕಾರ್ಯಕ್ರಮಗಳಿಗೆ ತುಸು ಸಡಿಲಿಕೆ ನೀಡಲಾಗಿದೆ.
ರ್ಯಾಲಿ, ಸಭೆ, ಪ್ರತಿಭಟನೆಗಳಿಗೆ ವಿಧಿಸಿದ್ದ ನಿರ್ಬಂಧ ಮುಂದುವರೆಯಲಿದೆ. ಹಾಗೆಯೇ, ಜಿಮ್, ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ 50-50 ನಿರ್ಬಂಧ ಮುಂದುವರೆಯಲಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.