ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಂದಿಗೆ 26 ವರ್ಷ ಸಂದಿವೆ. ಸುದೀಪ್ ಅವತ 26 ವರ್ಷದ ಯಶಸ್ಸಿನ ಬಗ್ಗೆ ಪತ್ನಿ ಪ್ರಿಯಾ ಸುದೀಪ್ ಶುಭ ಹಾರೈಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾ ಸುದೀಪ್ ಅವರು, ಪ್ರಪಂಚದಾದ್ಯಂತ ನಿಮಗಾಗಿ ನೀವು ಗಳಿಸಿರುವ ಪ್ರೀತಿ ಮತ್ತು ಗೌರವದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ನಾವು ನಿಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕುಶಲತೆಯ ಬಗ್ಗೆ ಸಂತೋಷದಿಂದ ಸ್ಫೂರ್ತಿ ಪಡೆಯುವುದನ್ನು ಮುಂದುವರಿಸುತ್ತೇವೆ.