ಕದ್ರಿ : ಮಹಾ ತಪಸ್ವಿಗಳಾದ ಪರಮಪೂಜ್ಯ ದಿಗಂಬರ ಮುನಿವರ್ಯರಾದ ಅಮೋಘ ಕೀರ್ತಿ ಮಹಾರಾಜ್ ಹಾಗೂ ಅಮರ ಕೀರ್ತಿ ಮಹಾರಾಜ್ ಅವರು ಇಂದು ಜ.31( ಸೋಮವಾರ) ರಂದು ಸಂಜೆ 5 ಗಂಟೆಗೆ ಕದ್ರಿ ಮೈದಾನದಲ್ಲಿ ( ತೇಜಸ್ವಿನಿ ಆಸ್ಪತ್ರೆ ಬಳಿ ) ಧರ್ಮೋಪದೇಶ ನೀಡಿ ಆಶೀರ್ವಚನ ನೀಡಲಿದ್ದಾರೆ .
ಇಬ್ಬರು ಮುನಿಗಳು ಮೂಲತಃ ಗುಜರಾತಿನವರಾಗಿದ್ದು, 15 ವರ್ಷಗಳಿಂದ ದಿಗಂಬರ ಮುನಿಗಳಾಗಿ ದೀಕ್ಷೆ ಪಡೆದು ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡುತ್ತಿದ್ದಾರೆ.
ಜ. 31 ರಂದು ಬೆಳಗ್ಗೆ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ಕದ್ರಿ ನಿವಾಸಕ್ಕೆ ಕಾಲ್ನಡಿಗೆಯಲ್ಲೇ ಮುನಿಗಳು ತಲುಪಲಿದ್ದು , ಸಂಜೆ ಸಾರ್ವಜನಿಕರನ್ನುದ್ದೇಶಿಸಿ ಪ್ರವಚನ ನೀಡಲಿದ್ದಾರೆ. ಮುನಿಗಳ ಮಾತೃಭಾಷೆ ಗುಜರಾತಿ ಆದರೂ ಕನ್ನಡವನ್ನು ಕಲಿತು ಕನ್ನಡದಲ್ಲಿ ಉಪದೇಶ ನೀಡಲಿದ್ದಾರೆ ಎಂದು ಕದ್ರಿ ವಾರ್ಡ್ನ ನಗರ ಪಾಲಿಕೆ ಸದಸ್ಯ ಮನೋಹರ ಶೆಟ್ಟಿ ತಿಳಿಸಿದ್ದಾರೆ.
https://youtu.be/Jy4_u1fTxR0