ಸಿಸಿಬಿ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿಯ ಬೂದಿಗೆರೆ ನಿವಾಸಿ ಲೂರ್ದ್ ನಾಥನ್ ಬಂಧಿತ ಆರೋಪಿ. ಈತ ತಾನು ಸಿಸಿಬಿ ಪೊಲೀಸ್ ಎಂದು ಜನಗರಿಗೆ ನಂಬಿಸಿ ವಂಚಿಸುತ್ತಿದ್ದ ಎಂದು ಪೊಲೀಸರು ಬಂಧಿಸಿದ್ದಾರೆ.
ತಾನು ಸಿಸಿಬಿ ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಈತ ಠಾಣೆಯಲ್ಲಿ ಹರಾಜು ಹಾಕುವ ವಾಹನಗಳನ್ನು ಕೊಡಿಸುವ ಭರವಸೆ ನೀಡುತ್ತಿದ್ದ. ಅನಂತರ, ಠಾಣೆಗೆ ಕರೆದೊಯ್ದು ಗಾಡಿ ತೋರಿಸುತ್ತಿದ್ದ. ಆ ದಿನವೇ ಮುಂಗಡ ಹಣ ಪಡೆದು ಕೊನೆಗೆ ಗಾಡಿ ನೀಡದೆ ಜನರಿಗೆ ವಂಚಿಸಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.