ಎಲ್ಲರೂ ಸಮಾನರು ಎಂಬ ಕಲ್ಪನೆ ತರಲು ಶಾಲಾ – ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಹಿಜಾಬ್, ಟೊಪ್ಪಿ, ಮೊಣಕಾಲು ಕಾಣುವ ತನಕ ಪ್ಯಾಟ್ ಹಾಕುವವರು ಮದರಸಕ್ಕೆ ಹೋಗಲಿ ಎಂದು ಸಂಸದ ಪ್ರತಾಪ ಸಿಂಹ ಆಗ್ರಹಿಸಿದ್ದಾರೆ.
ಮಡಿಕೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 1947 ರಲ್ಲೇ ಅಖಂಡ ಭಾರತ ಇಬ್ಭಾಗಿಸಿ ನಿಮಗೇ ಎರಡು ಭಾಗ ನೀಡಲಾಗಿದೆ. ಹಿಜಾಬ್ ಬೇಕು ಎನ್ನುವವರು ಅಲ್ಲಿಗೆ ತೊಲಗಲಿ. ಈ ದೇಶದಲ್ಲಿ ಇದ್ದವರು ನೆಲ, ಜಲ ಹಾಗೂ ಆಚಾರ ವಿಚಾರ ನಂಬಿ ಬದುಕಬೇಕು.
ಗಣೇಶ ಪೂಜೆ, ಶಾರದಾ ಪೂಜೆಯನ್ನು ಪ್ರಶ್ನಿಸಲು ಇದು ಬ್ರಿಟಿಷರ ಭಾರತ ಅಲ್ಲ ಎಂದು ಕಿಡಿಕಾರಿದ ಅವರು, ಇಲ್ಲಿ ಹಿಂದೂ ಧರ್ಮವೇ ಶ್ರೇಷ್ಠ ಎಂದು ಹೇಳಿದರು.
ಎಲ್ರೂ ಕಾಲೇಜಿಗೆ ಜಾಬ್ ಗಾಗಿ ಬರ್ತಾರೆ, ನೀವು ಹಿಜಾಬ್ ಗಾಗಿ ಬರ್ತಿನಿ ಅಂದರೆ ! ನೀವು ಹಿಜಾಬ್ ಹಾಕಿಕೊಂಡಾದರು ಹೋಗಿ, ಬುರ್ಖಾ ಹಾಕಿಕೊಂಡಾದರು ಹೋಗಿ ಅಥವಾ ಪರದೆ ಅಕಾರದ ಟೋಪಿ ಬೇಕಾದರೂ ಹಾಕಿಕೊಂಡಾದರು ಹೋಗಿ ಅಥವಾ ಮೊಣಕಾಲು ಕಾಣುವಂತಹ ಜುಬ್ಬ ಪೈಜಾಬ ಹಾಕಿಕೊಂಡಾದರು ಹೋಗಿ. ನೀವು ಹೋಗಬೇಕಾದ ಸ್ಥಳ ಶಾಲಾ ಕಾಲೇಜಲ್ಲ , ಮದರಸಾ ! ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಎಲ್ರೂ ಕಾಲೇಜಿಗೆ ಜಾಬ್ ಗಾಗಿ ಬರ್ತಾರೆ, ನೀವು ಹಿಜಾಬ್ ಗಾಗಿ ಬರ್ತಿನಿ ಅಂದರೆ !
ನೀವು ಹಿಜಾಬ್ ಹಾಕಿಕೊಂಡಾದರು ಹೋಗಿ, ಬುರ್ಖಾ ಹಾಕಿಕೊಂಡಾದರು ಹೋಗಿ ಅಥವಾ ಪರದೆ ಅಕಾರದ ಟೋಪಿ ಬೇಕಾದರೂ ಹಾಕಿಕೊಂಡಾದರು ಹೋಗಿ ಅಥವಾ ಮೊಣಕಾಲು ಕಾಣುವಂತಹ ಜುಬ್ಬ ಪೈಜಾಬ ಹಾಕಿಕೊಂಡಾದರು ಹೋಗಿ.
ನೀವು ಹೋಗಬೇಕಾದ ಸ್ಥಳ ಶಾಲಾ ಕಾಲೇಜಲ್ಲ , ಮದರಸಾ ! pic.twitter.com/3Ee1TlTCNi— Pratap Simha (Modi Ka Parivar) (@mepratap) February 5, 2022