ಪ್ರಚಲಿತ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತಿದ್ದು ನೂತನ ವಾಹನ ಸವಾರರಿಗೆ ಹೊಸ ರೀತಿಯ ಸವಾರಿಯ ಅನುಭವವನ್ನು ನೀಡುತ್ತಿದೆ. ಅಲ್ಲದೇ, ಎಲೆಕ್ರಿಕ್ ವಾಹನಗಳು ಪರಿಸರ ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಹಿನ್ನೆಲೆಯಲ್ಲಿ ಉಜಿರೆಯ ಮಂಜುನಾಥ ಪಾಲಿಟೆಕ್ನಿಕ್ ಕಾಲೇಜು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು, ಎಲೆಕ್ಟ್ರಿಕ್ ವಾಹನಗಳ ಕುರಿತಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಲು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತ ಪ್ರೌಢ ಶಾಲಾ ವಿದ್ಯಾರ್ಥಿ/ ವಿದ್ಯಾರ್ಥಿನೀಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ವಿಶೇಷ ಸೂಚನೆ:
• ಭಾಗವಹಿಸುವ ವಿದ್ಯಾರ್ಥಿ/ ವಿದ್ಯಾರ್ಥಿನೀಯರು ತಾವು ಬರೆದ ಪ್ರಬಂಧವನ್ನು, ನಿಮ್ಮ ಶಾಲೆಯ ಮುಖ್ಯೋಪಾಧ್ಯಯರ ಸಹಿ ಮತ್ತು ಶಾಲೆಯ ಮೊಹರಿನ ಜೊತೆ ಫೋಟೋ ತೆಗೆದು ಅಥವಾ PDF ಮಾಡಿ sdmpolytechnicessaywriting2021@gmail.com ಗೆ ದಿನಾಂಕ 25-02-2022 ರ ಒಳಗೆ ಕಳುಹಿಸಬಹುದಾಗಿದೆ.
• ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವಿದ್ಯನ್ಮಾನ ಮತ್ತು ಸಂವಹನ ವಿಭಾಗವನ್ನು ಸಂಪರ್ಕಿಸಬೇಕು.
• 9480053544,7624838196,9535223701,9844667993 ಈ ಮೊಬೈಲ್ ಸಂಖ್ಯೆಗಳಿಗೂ ಸಂಪರ್ಕಿಸಬಹುದು.