ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ವಿವಾದಾತ್ಮಕ ವ್ಯಾಖ್ಯಾನ ನೀಡಿದ್ದ ನ್ಯಾಯಮೂರ್ತಿ ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದ ಹೆಚ್ಚುವರಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರು ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 2021 ರಲ್ಲಿ, ಅಪ್ರಾಪ್ತ ವಯಸ್ಕರ ಕೈಯನ್ನು ಹಿಡಿಯುವುದು, ಅವನ ಪ್ಯಾಂಟ್ ಜಿಪ್ ತೆರೆಯುವಂತೆ ಮಾಡುವುದು ಲೈಂಗಿಕ ದೌರ್ಜನ್ಯವಲ್ಲ. ಲೈಂಗಿಕಾಸಕ್ತಿಯಿಂದ ದೇಹವನ್ನು ನೇರವಾಗಿ ಸ್ಪರ್ಶಿಸಿದರೆ ಮಾತ್ರ ಲೈಂಗಿಕ ದೌರ್ಜನ್ಯವೆಂದು, ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಸ್ಷುವಲ್ ಅಫೆನ್ಸಸ್ (ಫೋಕ್ಸೊ) ಕಾಯಿದೆಯಡಿ ಪರಿಗಣಿಸಬಹುದು ಎಂದಿದ್ದರು.
ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಶಿಫಾರಸನ್ನು ಆಗಿನ ಸುಪ್ರೀಂ ಕೋರ್ಟ್ ಕೊಲಿಜಿಯಂ ಹಿಂಪಡೆದಿತ್ತು. ಒಂದು ವರ್ಷ ಹೆಚ್ಚುವರಿ ನ್ಯಾಯಾಧೀಶರಾಗಿ ಮುಂದುವರಿದರು.
ಇದು ಶುಕ್ರವಾರದ ನಂತರ ಯಾವುದೇ ವಿಸ್ತರಣೆ ನೀಡಿಲ್ಲ. ಅವರು ಅಧಿಕಾರದಲ್ಲಿ ಮುಂದುವರಿದಿದ್ದೇ ಆದಲ್ಲಿ ಶುಕ್ರವಾರದಿಂದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಬೇಕಾಗಿತ್ತು.