ವಕೀಲ ಜಗದೀಶ್ ಕೆಎನ್ ಮಹಾದೇವ್ ಅವರ ಭ್ರಷ್ಠಾಚಾರ ವಿರೋಧಿ ಹೋರಾಟಕ್ಕೆ ಜೆಡಿಎಸ್ ಬಹಿರಂಗ ಬೆಂಬಲವನ್ನು ಘೋಷಣೆ ಮಾಡಿದೆ.
ಜೆಡಿಎಸ್ ಪಕ್ಷದ ಯುವ ನಾಯಕಿ ನಜ್ಮಾ ನಜೀರ್ ಅವರು ವಕೀಲ ಜಗದೀಶ್ ಅವರಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೀವು ಹಿಂದೂ ಅಥವಾ ಮುಸ್ಲಿಂ ಆಗಿರಲಿ, ಕರ್ನಾಟಕದಲ್ಲಿ ಸತ್ಯ ಮಾತನಾಡಬಾರದು. ನೀವು ಸತ್ಯ ಮಾತನಾಡಿದರೆ, ನೀವು ಜನರ ಪರವಾಗಿದ್ದರೆ, ಸಂವಿಧಾನದ ಪರವಾಗಿದ್ದರೆ, ನೀವು ಭ್ರಷ್ಟಾಚಾರ ಮತ್ತು ತಾರತಮ್ಯದ ವಿರುದ್ಧ ಇದ್ದರೆ ಕರ್ನಾಟಕದ ಗೂಂಡಾ ಸರ್ಕಾರದಿಂದ ಶಿಕ್ಷೆಯಾಗುತ್ತದೆ. ನಾವು ನಿಮ್ಮೊಂದಿಗೆ ಇದ್ದೇವೆ ಜಗದೀಶ್ ಅವರೇ ಎಂದು ಟ್ವೀಟ್ ಮಾಡಿದ್ದಾರೆ.
ವಕೀಲ ಜಗದೀಶ್ ಕೆಎನ್ ಮಹಾದೇವ್ ಅವರು ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ನಿರಂತರವಾಗಿ ಸಾಮಾಜಿಕ ಜಾಲತಾಣದ ಮೂಲಕ ಅಕ್ರಮ ಆಸ್ತಿಯ ಆರೋಪವನ್ನು ಮಾಡುತ್ತಿದ್ದರು. ಅಲ್ಲದೇ, ಇದಕ್ಕೆ ಸಂಬಂಧಿಸಿದಂತೆ ಮಾನನಷ್ಠ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ.
No matter whether you are Hindu or Muslim. One must not speak truth at karnataka. If you speak truth,if you are pro people,pro constitution,if you are against corruption and discrimination you will be punished by Goonda Sarkar of karnataka.
We are with you advocate jagadeesh. pic.twitter.com/Ry0SgeFd0a— Najma Nazeer Chikkanerale (@najmanazeerINC) February 13, 2022
ನಿನ್ನೆಯಷ್ಟೇ ಅವರು ವಿಚಾರಣೆಗೆ ಕೋರ್ಟ್ಗೆ ಹೋದಂತಹ ಸಂದರ್ಭದಲ್ಲಿ ಅವರ ಮಗನ ಮೇಲೆ ಕೆಲವರಿಂದ ಹಲ್ಲೆಯಾಗಿತ್ತು. ವಕೀಲ ಜಗದೀಶ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಾರಾಯಣಸ್ವಾಮಿ ಎನ್ನುವ ವಕೀಲರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶರನ್ನು ಇಂದು ಬೆಳ್ಳಂಬೆಳಿಗ್ಗೆ ಪೊಲೀಸರು ಬಂಧಿಸಿದ್ದರು. ಇವರಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನು, ವಕೀಲ ಜಗದೀಶ್ ಪುತ್ರನ ವಿರುದ್ಧದ ಹಲ್ಲೆ ಆರೋಪ ಸಂಬಂಧ FIR ದಾಖಲಾಗಿದೆ.