ಇದೇ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಟಾಟಾ ಐಪಿಲೆ್-2022 ರ ಹರಾಜು ಪ್ರಕ್ರಿಯೆ ಬಹು ತೀವ್ರತರವಾಗಿ ನಡೆಯಿತು. ಒಟ್ಟು 10 ಪ್ರಾಂಚೈಸಿಗಳು ಸ್ಪರ್ಧಾತ್ಮಕವಾಗಿ ಹರಾಜಿನಲ್ಲಿ ಭಾಗವಹಿಸಿ, ತಮ್ಮ ತಂಡಗಳನ್ನು ಆದಷ್ಟು ಗಟ್ಟಿಯಾಗಿಸುವಲ್ಲಿ ಪ್ರಯತ್ನ ಪಟ್ಟಿವೆ.
2022 ರ ಐಪಿಎಲ್ ಹರಾಜಿನಲ್ಲಿ ದೊಡ್ಡ ದೊಡ್ಡ ಆಟಗಾರನ್ನು ಪ್ರಾಂಚೈಸಿಗಳು ಖರೀದಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಾರಿಯ ಹರಾಜಿನಲ್ಲಿ ಇಶಾನ್ ಕಿಶಾನ್ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಇವರನ್ನು ಮುಂಬೈ ಇಂಡಿಯನ್ಸ್ ತಂಡ 15.25 ಕೋ.ರೂ ನೀಡಿ ಖರೀದಿಸಿದೆ. ಒಟ್ಟಾರೆಯಾಗಿ ಹರಾಜಿನಲ್ಲಿ 10 ಪ್ರಾಂಚೈಸಿಗಳು 551.70 ಕೋ.ರೂ ಬೆಲೆಯಲ್ಲಿ 204 ಆಟಗಾರರನ್ನು ಖರೀದಿಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಹಿರಿಯ ಆಗಾರರೇ ಖರೀದಿಯಾಗದೇ ಉಳಿದಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಮಾರಾಟವಾಗದೇ ಉಳಿದಿರುವ ಆಟಗಾರರ ಪಟ್ಟಿಯನ್ನು ಇಲ್ಲಿ ನೋಡೋಣ.
ಸುರೇಶ್ ರೈನಾ (ಮೂಲ ಬೆಲೆ 2 ಕೋಟಿ ರೂ.):
ಐಪಿಎಲ್ನಲ್ಲಿ ಸಾರ್ವಕಾಲಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಎಡಗೈ ಆಟಗಾರ ಸುರೇಶ್ ರೈನಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 205 ಪಂದ್ಯಗಳನ್ನು ಆಡಿದ್ದಾರೆ ಮತ್ತು 32.51 ಸರಾಸರಿಯಲ್ಲಿ 5,528 ರನ್ ಗಳಿಸಿದ್ದಾರೆ. ರೈನಾ ರನ್ ಗಳಿಸುವವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರಿಗಿಂತ ಹಿಂದಿದ್ದಾರೆ. ಆದರೆ, ರೋಹಿತ್ ಶರ್ಮಾಗಿಂತ ಉತ್ತಮ ರನ್ ಸರಾಸರಿಯನ್ನು ಹೊಂದಿದ್ದಾರೆ. ಹಾಗೆಯೇ, ಮೇಲಿನ ಮೂರು ಆಟಗಾರರಿಗಿಂತ ಉತ್ತಮ ಸ್ಟ್ರೈಕ್-ರೇಟ್ ಹೊಂದಿದ್ದಾರೆ.
35 ವರ್ಷಗಳಲ್ಲಿ, ರೈನಾ ಇನ್ನೂ ಉತ್ತಮ ಸ್ಥಿತಿಯಲ್ಲಿರುವಂತೆ ತೋರುತ್ತಿದೆ. ಆದರೆ, ಅವರ ಮೂಲ ಬೆಲೆ ರೂ 2 ಕೋಟಿ ಮೊತ್ತದಿಂದ ತಂಡಗಳು ಇವರನ್ನು ಖರೀದಿಸಲು ಸಾಧ್ಯವಾಗಿಲ್ಲ. ಇವರು 2021 ರ ಐಪಿಎಲ್ನಲ್ಲಿ 12 ಪಂದ್ಯಗಳಲ್ಲಿ 17.77 ರ ಅಲ್ಪ ಸರಾಸರಿಯಲ್ಲಿ ಕೇವಲ 160 ರನ್ಗಳನ್ನು ಗಳಿಸಿದರು.
ಸ್ಟೀವ್ ಸ್ಮಿತ್ (ಮೂಲ ಬೆಲೆ 2 ಕೋಟಿ ರೂ.):
ಆಸ್ಟ್ರೇಲಿಯನ್ ರನ್-ಮೆಷಿನ್ ಎಂದೇ ಖ್ಯಾತಿಯಾಗಿರುವ ಸ್ಟಿವ್ ಸ್ಮಿತ್ ಅವರು ಮಾರಾಟವಾಗದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ದೆಹಲಿ ಕ್ಯಾಪಿಟಲ್ಸ್ಗಾಗಿ ಸ್ಮಿತ್ ಎಂಟು ಪಂದ್ಯಗಳಲ್ಲಿ 25.33 ಸರಾಸರಿ ಮತ್ತು 112.59 ಸ್ಟ್ರೈಕ್ ರೇಟ್ನಲ್ಲಿ 152 ರನ್ ಗಳಿಸಿದ್ದರು.
ಅವರ ಒಟ್ಟಾರೆ ಅನುಭವವು ಕೆಲವು ತಂಡಗಳಿಗೆ ಸೂಕ್ತವಾಗಿ ಬರಬಹುದು. ಆದರೆ ಇವರ ಮೇಲಿನ ಮೂಲ ಬೆಲೆ ಹೆಚ್ಚಾಗಿತ್ತು.
ಶಕೀಬ್ ಅಲ್ ಹಸನ್ (ಮೂಲ ಬೆಲೆ 2 ಕೋಟಿ ರೂ.):
ಬಾಂಗ್ಲಾದೇಶದ ತಾರೆ ಐಸಿಸಿಯ ಆಲ್ರೌಂಡರ್ಗಳ ODI ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ICC ಯ T20I ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಕಳೆದ ಐಪಿಎಲ್ನಲ್ಲಿ ಇವರ ಕಳಪೆ ಪ್ರದರ್ಶನ ಇದಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಕೆಕೆಆರ್ ತಂಡದಲ್ಲಿದ್ದ ಇವರು 8 ಪಂದ್ಯಗಳಲ್ಲಿ 47 ರನ್ಗಳಿಸಿ ಕೇವಲ 4 ವಿಕೇಟ್ ಪಡೆದಿದ್ದರು.
ಇಮ್ರಾನ್ ತಾಹೀರ್ (ಮೂಲ ಬೆಲೆ 2 ಕೋ.ರೂ)
ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಅವರಿಗೆ 42 ವರ್ಷ ವಯಸ್ಸಾಗಿದೆ. ಅಲ್ಲದೇ ಇವರ ಮೂಲ ಬೆಲೆ 2 ಕೋ.ರೂ ಆಗಿರುವುದರಿಂದ ಪ್ರಾಂಚೈಸಿಗಳು ಇವರನ್ನು ಖರೀದಿಸಿಲ್ಲ. ಕಳೆದ ವರ್ಷದ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಒಂದೇ ಪಂದ್ಯದಲ್ಲಿ ಆಟವಾಡಿದ್ದರು.
ಆ್ಯರನ್ ಪಿಂಚ್ ( ಮೂಲ ಬೆಲೆ 1.50 ಕೋ.ರೂ)
ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೇಟ್ ನಾಯಕರಾದ ಆ್ಯರನ್ ಪಿಂಚ್ ಐಪಿಎಲ್ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಆದರೆ ಇತ್ತೀಚಿನ ಕೆಲ ಸೀಸನ್ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರಲ್ಲ. ಫಿಂಚ್ ಅವರು 2020 ರಲ್ಲಿ RCB ತಂಡದಲ್ಲಿ ಆಡಿದ್ದರು.
ದಾವಿದ್ ಮಲಾನ್ (ಮೂಲ ಬೆಲೆ ರೂ 1.50 ಕೋಟಿ):
ICC ಶ್ರೇಯಾಂಕದ ಪ್ರಕಾರ T20I ಗಳಲ್ಲಿ ದಾವಿದ್ ಮಲಾನ್ ಅಗ್ರ ಬ್ಯಾಟ್ಸ್ಮನ್ ಆಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿ ಇವರ ಆಟದಲ್ಲಿ ಸ್ಥಿರತೆ ಕಂಡು ಬರುತ್ತಿಲ್ಲ.
ಇಯಾನ್ ಮಾರ್ಗನ್ (ಮೂಲ ಬೆಲೆ ರೂ 1.50 ಕೋಟಿ):
ಇಂಗ್ಲೆಂಡ್ ನ ಟೆಸ್ಟ್ ಕ್ರಿಕೇಟ್ ನಾಯಕರಾದ ಇಯಾನ್ ಮಾರ್ಗನ್ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಐಪಿಎಲ್ 2021 ರಲ್ಲಿ ಫೈನಲ್ಗೆ ತೆಗೆದುಕೊಂಡು ಹೋಗುವಲ್ಲಿ ಸಫಲರಾಗಿದ್ದರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತರು.
ಮಾರ್ಗನ್ 2022 ರಲ್ಲಿ 17 ಪಂದ್ಯಗಳಲ್ಲಿ ಕೇವಲ 133 ರನ್ ಗಳಿಸಿದ್ದರು. ಇದು ಅವರೆಡೆಗೆ ಪ್ರಾಂಚೈಸಿಗಳನ್ನು ಆಕರ್ಷಿತರಾಗದೇ ಇರಲು ಕಾರಣವಾಗಿರಬಹುದು.
ಕ್ರಿಸ್ ಲಿನ್ (ಮೂಲ ಬೆಲೆ ರೂ 1.50 ಕೋಟಿ):
ಐಪಿಎಲ್ 2021 ರ ಸೀಸನ್ಗೆ ಮುಂಚಿತವಾಗಿ ರೂ 2 ಕೋಟಿಗೆ ಕ್ರಿಸ್ ಲಿನ್ರನ್ನು ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ತೆಗೆದುಕೊಂಡಿತು. ಆದರೆ, ಅವರು ಕೇವಲ ಒಂದು ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಗಿತ್ತು.
ತಬ್ರೈಜ್ ಶಮ್ಸಿ (ಮೂಲ ಬೆಲೆ ರೂ 1 ಕೋಟಿ):
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬಾರತದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಟಿ20 ಆಟದಲ್ಲಿ ಇವರು ಎರಡನೇ ಶ್ರೇಯಾಂಕದಲ್ಲಿದ್ದಾರೆ. ಆದಾಗ್ಯೂ, ಪ್ರಾಂಚೈಸಿಗಳು ಇವರನ್ನು ಖರೀದಿಸುವಲ್ಲಿ ನಿರಾಸಕ್ತಿ ತೋರಿಸಿವೆ.