ಜಿಲ್ಲೆಯ ಚೇಳೂರು ಪೊಲೀಸರು ಯುವಕನೋರ್ವನನ್ನು ಮೂರು ದಿನಗಳ ಕಾಲ ಠಾಣೆಯಲ್ಲಿಟ್ಟುಕೊಂಡು ಬೆನ್ನುಮೂಳೆ ಮುರಿಯುವಂತೆ ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕೇಳಿಬಂದಿದೆ.
ಚೇಳೂರು ಸಮೀಪದ ಕೊಡಿಯಾಲ ಕಾಲೋನಿಯ ಮಣಿಕಂಠ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕೇಳಿಬಂದಿದೆ. ಫೆಬ್ರವರಿ 8 ರಂದು ನೀರು ಹಿಡಿಯುವ ವಿಚಾರಕ್ಕೆ ಯಲ್ಲಮ್ಮ ಹಾಗೂ ಮಣಿಕಂಠ ಕುಟುಂಬದ ನಡುವೆ ಜಗಳ ನಡೆದಿತ್ತು. ಇದೇ ವಿಚಾರವಾಗಿ ಯಲ್ಲಮ್ಮ ಕುಟುಂಬಸ್ಥರು ಮಣಿಕಂಠ ವಿರುದ್ಧ ದೂರು ದಾಖಲಿಸಿದ್ದರು.
ಈ ಸಂಬಂಧ ಮಣಿಕಂಠನನ್ನು ಠಾಣೆಗೆ ಕರೆದೊಯ್ದ ಚೇಳೂರು ಪಿಎಸ್ಐ ವಿಜಯಕುಮಾರಿ ಹಾಗೂ ಸಿಬ್ಬಂದಿ, ಲಾಠಿ, ಬೂಟ್ ಕಾಲಿನಿಂದ ಒದ್ದು ಕಿರುಕುಳ ನಿಡಿದ್ದಾರಂತೆ. ಜೊತೆಗೆ ಥಳಿತದ ಬಗ್ಗೆ ಜಡ್ಜ್ ಮುಂದೆ ಹೇಳಿದ್ರೆ ಬೇಲ್ ಕ್ಯಾನ್ಸಲ್ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ಮಣಿಕಂಠ ಹೇಳಿದ್ದಾನೆ. ಈತನ ವಿರುದ್ದ ಚೇಲೂರು ಪೊಲೀಸರು ಸೆಕ್ಷನ್ 506, 504, 324, 354 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಮಣಿಕಂಠ, ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾನೆ. ಮಣಿಕಂಠನಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.