ಪುಟಾಣಿ ಕ್ರಿಕೇಟಿಗನ ಚಿಕಿತ್ಸೆಗೆ 31 ಲಕ್ಷ ರೂ. ನೀಡುವ ಮೂಲಕ ಭಾರತ ಕ್ರಿಕೇಟ್ ತಂಡದ ಉಪನಾಯಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರು ಮಾನವೀಯತೆ ಮೆರೆದಿದ್ದಾರೆ.
11 ವರ್ಷದ ವರದ್ ನಲಪಡೆ ಎಂಬ ಬಾಲಕ ಬ್ಲಡ್ ಡಿಸಾರ್ಡರ್ನಿಂದ ಬಳಲುತ್ತಿದ್ದಾನೆ. ಮಗುವಿಗೆ ಬಿಎಂಟಿ (Bone Marrow Transplant) ಚಿಕಿತ್ಸೆಗೆ 31 ಲಕ್ಷ ರೂ ಅವಶ್ಯಕತೆಯಿತ್ತು. ಈ ವೆಚ್ಚವನ್ನು ಕೆಎಲ್ ರಾಹುಲ್ ಭರಿಸಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ನಿಂದ ಬಾಲಕ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ. ಕಳೆದ ಡಿಸೆಂಬರ್ನಲ್ಲಿ ವರದ್ ಕುಟುಂಬಸ್ಥರು 35 ಲಕ್ಷ ರೂ.ಗಳಿಗಾಗಿ ಕ್ಯಾಂಪೇನ್ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಕೆಎಲ್ ರಾಹುಲ್ ಹಾಗೂ ಅವರ ತಂಡ ಮಗುವಿನ ಚಿಕಿತ್ಸೆಗೆ ಹಣ ನೀಡಿದೆ ಎಂದು ತಿಳಿದುಬಂದಿದೆ.
ಸದ್ಯ ಬಾಲಕ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.