ಇಂದು ಭಾನುವಾರ ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ.
ಟ್ವಿಟರ್ ಖಾತೆ ಹ್ಯಾಕ್ ಮಾಡಿರುವ ಹ್ಯಾಕರ್ಸ್, ಮೂರು ದಿನಗಳ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ್ದಾರೆ. ಉಕ್ರೇನ್ ರಾಜಧಾನಿ ಕೈವ್ ಸುತ್ತುವರೆದಿರುವ ರಷ್ಯಾಕ್ಕಾಗಿ ಕ್ರಿಪ್ಟೋಕರೆನ್ಸಿಯನ್ನು ದೇಣಿಗೆಯನ್ನಾಗಿ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಹ್ಯಾಕರ್ಸ್ ಕ್ರಿಪ್ಟೋಕರೆನ್ಸಿ ದೇಣಿಗೆ ಕೇಳಿದ ಟ್ವೀಟ್ಗಳು 5 ನಿಮಿಷದ ನಂತರ ಡಿಲೀಟ್ ಆಗಿವೆ.
ಇತ್ತೀಚಿನ ದಿನಗಳಲ್ಲಿ ಹ್ಯಾಕರ್ಸ್ ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ರಾಜಕೀಯ ನಾಯಕರ ಖಾತೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಧಾನಿ ಮೋದಿಯವರ ಖಾತೆಯನ್ನೂ ಹ್ಯಾಕ್ ಮಾಡಿದ್ದ ಹ್ಯಾಕರ್ಸ್, ಬಿಟ್ಕಾಯಿನ್ ಬಗೆಗೆ ಬರೆದುಕೊಂಡಿದ್ದರು. ಅನಂತರ ಅವರ ಖಾತೆಯನ್ನು ಮರಳಿ ಪಡೆಯಲಾಗಿತ್ತು. 2020 ರ ಸೆಪ್ಟೆಂಬರ್ ನಲ್ಲಿ, ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ಗೆ ಲಿಂಕ್ ಮಾಡಲಾದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.