ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಉಕ್ರೇನ್ನ ಖಾರ್ಕೀವ್ನಲ್ಲಿ ರಷ್ಯಾ ನಡೆಸಿದ ಶೇಲ್ ದಾಳಿಗೆ ಸಿಲುಕಿ ಕನ್ನಡಿಗ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಎಂದು ಗುರುತಿಸಲಾಗಿದೆ.
ಭಾರತದ ವಿದ್ಯಾರ್ಥಿ ಶೇಲ್ ದಾಳಿಯಲ್ಲಿ ಸಾವನ್ನಪ್ಪಿರುವ ಮಾಹಿತಿಯನ್ನು ನಉಕ್ರೇನ್ ನ ವಿಧಿವಿಜ್ಞಾನ ತಜ್ಞೆ ಖಚಿತಪಡಿಸಿದ್ದಾರೆ.
Foreign Secretary is calling in Ambassadors of Russia and Ukraine to reiterate our demand for urgent safe passage for Indian nationals who are still in Kharkiv and cities in other conflict zones.
Similar action is also being undertaken by our Ambassadors in Russia and Ukraine.
— Randhir Jaiswal (@MEAIndia) March 1, 2022
ಇನ್ನು ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ, ಭಾರತೀಯ ವಿದ್ಯಾರ್ಥಿಯೊರ್ವ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ವಿದ್ಯಾರ್ಥಿ ನಿಧನಕ್ಕೆ ಸಚಿವಾಲಯ ಸಂತಾಪ ಸೂಚಿಸಿದೆ ಎಂದು ಟ್ವೀಟ್ ಮಾಡಿದೆ.