ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆತ್ತಿರುವುದರಿಂದ, ಮಾಸ್ಕೋ ಮೇಲೆ ಅಮೇರಿಕಾ, ಐರೋಪ್ಯ ದೇಶಗಳು ಸಾಲು ಸಾಲು ಆರ್ಥಿಕ ದಿಗ್ಬಂಧನ ವಿಧಿಸುತ್ತಿವೆ. ರಷ್ಯಾದ ಕಚ್ಚಾ ತೈಲ ಖರೀದಿಗೆ ಕೆಲ ಕಂಪನಿಗಳು ಮುಂದಾಗುತ್ತಿಲ್ಲ.ಇದರ ಪರಿಣಾಮ ಜಗತ್ತಿನ ಮೇಲೆಯೂ ಆಗುತ್ತಿದೆ.
ಇಂದು ಬ್ರೇನ್ಟ್ ಕಚ್ಚಾ ತೈಲದ ಬೆಲೆ ಏಕಾಏಕೀ 4.88ಡಾಲರ್ ಹೆಚ್ಚಾಗಿದ್ದು, ಬ್ಯಾರೆಲ್ ತೈಲದ ಬೆಲೆ 110.09 ಡಾಲರ್ ಆಗಿಬಿಟ್ಟಿದೆ. 2014ರ ಜುಲೈ ಬಳಿಕ ಇದು ಗರಿಷ್ಟ ಏರಿಕೆ.
WTI ಕಚ್ಚಾ ತೈಲದ ಬೆಲೆ ಏಕಾಏಕೀ 5.06 ಡಾಲರ್ ಹೆಚ್ಚಾಗಿದ್ದು, ಬ್ಯಾರೆಲ್ ತೈಲದ ಬೆಲೆ 108.64 ಡಾಲರ್ ಗೆ ಏರಿಕೆ ಆಗಿದೆ.
ಕಚ್ಚಾ ತೈಲ ಪೂರೈಕೆಯಲ್ಲಿ ರಷ್ಯಾ ಪಾಲು ಶೇಕಡಾ 8ರಷ್ಟಿದೆ. ಆದರೆ ಆರ್ಥಿಕ ದಿಗ್ಬಂಧನದ ಕಾರಣ ಮುಂದಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಇನ್ನಷ್ಟು ಹೆಚ್ಚುವುದು ಖಚಿತವಾಗಿದೆ.