ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗುಮ್ಮಕಲ್ಲುಗುಡ್ಡಗಣಿಯಲ್ಲಿ ಫೆಬ್ರವರಿ 4ರಂದು ದುರಂತ ಸಂಭವಿಸಿತ್ತು. ದುರಂತ ಸಂಭವಿಸಿದಾಗ ಗಣಿಯಲ್ಲಿ ಗಣಿಯಲ್ಲಿ 10 ಮಂದಿ ಕಂಪ್ರೆಸರ್ ಕಾರ್ಮಿಕರು, 5 ಟಿಪ್ಪರ್ 4 ಹಿಟಾಚಿ ವಾಹನಗಳಿದ್ದವು.
ಮಡಹಳ್ಳಿ ಬಳಿಯ ಗುಮ್ಮಕಲ್ಲು ಗುಡ್ಡ ಬಂಡೆ ಕುಸಿತ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಗಮನ ಸೆಳೆದಿದೆ. ಗ್ರಾಮದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ನಿವಾಸಿಗಳು ಒತ್ತಾಯ ಮಾಡಿದ್ದಾರೆ. ಗಣಿಗಾರಿಕೆಯ ಶಬ್ದದಿಂದ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಡಳಿತ ಎನ್ಡಿಆರ್ಎಫ್ ಸಿಬ್ಬಂದಿ ಮತ್ತು ಶ್ವಾನ ದಳವನ್ನು ಕರೆಸಿದೆ. ದುರಂತ ಸಂಭವಿಸಿದಾಗ ಸುಮಾರು ಹತ್ತು ಜನರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅರ್ಥ್ ಮೂವಿಂಗ್ ಉಪಕರಣದ ಮ್ಯಾನೇಜರ್ ಪ್ರಾನ್ಸಿಸ್ ಹೇಳಿದ್ದಾರೆ.
ಒಂದು ಎಕರೆಗೆ ಅನುಮತಿ ಪಡೆದು ನಾಲ್ಕು ಎಕರೆಯಲ್ಲಿ ಕಲ್ಲು ಗಣಿ ಕ್ವಾರಿ ನಡೆಸುತ್ತಿದ್ದಾರೆ ಎಂದು ಕೆಆರ್ಆರ್ಎಸ್ ಮುಖಂಡ ಮಾದಪ್ಪ ಆರೋಪಿಸಿದ್ದಾರೆ. ಕಳೆದ 10 ವರ್ಷಗಳಿಂದ ಕಲ್ಲು ಕ್ವಾರಿ ಮುಚ್ಚಲು ಪದೇ ಪದೇ ಒತ್ತಾಯಿಸುತ್ತಿದ್ದರು ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಎಷ್ಟು ಮಂದಿ ಸಿಕ್ಕಿಬಿದ್ದಿದ್ದಾರೆಂದು ನನಗೆ ಖಚಿತವಾದ ಮಾಹಿತಿಯಿಲ್ಲ , ಕಲ್ಲು ಕ್ವಾರಿ ಮ್ಯಾನೇಜರ್ ನವೀದ್ ನನ್ನು ಬಂಧಿಸಲಾಗಿದೆ ಎಂದು ಮೈಸೂರು ಎಸ್ಪಿ ಶಿವಕುಮಾರ್ ತಿಳಿಸಿದ್ದಾರೆ. ಎನ್ಡಿಆರ್ಎಫ್, ಪೊಲೀಸ್, ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ತಿಳಿಸಿದ್ದಾರೆ.